ಸ್ಥಾನ

ರಾಜ್ಯ ಸಂಚಾಲಕರು, ಆಮ್ ಆದ್ಮಿ ಪಾರ್ಟಿ ಕರ್ನಾಟಕ
ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯರು
ರಾಷ್ಟ್ರೀಯ ವಕ್ತಾರರು
ದೇಣಿಗೆ ಸಂಗ್ರಹ ತಂಡದ ಮುಖ್ಯಸ್ಥರು

ವ್ಯಕ್ತಿಚಿತ್ರ

ಬೆಂಗಳೂರಿನಲ್ಲಿ ಉದ್ಯಮಿ ಆಗಿರುವ ಪೃಥ್ವಿ ರೆಡ್ಡಿ ಅವರು, ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯ ಸದಸ್ಯರು ಆಗಿದ್ದಾರೆ. ಪಾರ್ಟಿಯ ನೀತಿ ರಚನೆಯಲ್ಲಿ ಭಾಗವಹಿಸಿದ್ದರು ಮತ್ತು ಪಾರ್ಟಿಯ ಆರ್ಥಿಕ ನೀತಿಯ ಜವಾಬ್ದಾರಿ ಹೊತ್ತಿರುವ ತಂಡದ ಮುಖ್ಯಸ್ಥರಾಗಿದ್ದರು. 2014-15ರ ಅವಧಿಯಲ್ಲಿ ಭಾರತದಾದ್ಯಂತ ಪಕ್ಷ ಸಂಘಟನೆ ಕಟ್ಟುವ ನಿಟ್ಟಿನಲ್ಲಿ ನಡೆದ ‘ಮಿಷನ್ ವಿಸ್ತಾರ್’ ಯೋಜನೆಯ ಜವಾಬ್ದಾರಿಯೂ ಇವರದಾಗಿತ್ತು.
ಕರ್ನಾಟಕದಲ್ಲಿ ಭ್ರಷ್ಟಾಚಾರದ ವಿರುದ್ಧ ಹುಟ್ಟಿದ ನಾಗರಿಕರ ಆಂದೋಲನದ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ. ಇದು ನಂತರ ಇಂಡಿಯಾ ಎಗೈನ್ಸ್ಟ್ ಕರಪ್ಶನ್, ಕರ್ನಾಟಕ ಅಧ್ಯಾಯ (India Against Corruption, Karnataka Chapter) ಆಗಿ ವಿಕಸನಗೊಂಡಿತು. IAC ಯ ರಾಷ್ಟ್ರಿಯ ಕೋರ್ ಸಮಿತಿಯ ಸದಸ್ಯರಾಗಿದ್ದ ಇವರು, ಅಣ್ಣಾ ಹಜಾರೆ, ಅರವಿಂದ್ ಕೇಜ್ರಿವಾಲ್ ಹಾಗೂ ಇತರರ ಜೊತೆಗೆ ಕೆಲಸ ಮಾಡಿ, ರಾಷ್ಟ್ರವ್ಯಾಪಿ ಅಭಿಯಾನ ನಡೆಸಿದ್ದಾರೆ.
ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ಆಸಕ್ತಿ ಇದ್ದ ರೆಡ್ಡಿ ಅವರು 2010ರಲ್ಲಿ ಬೆಂಗಳೂರಿನಲ್ಲಿ ನಡೆದ ‘ಭ್ರಷ್ಟಾಚಾರ ಸಾಕು’ ಎಂಬ ರ್ಯಾ ಲಿಯಲ್ಲಿ ಕೇಜ್ರಿವಾಲ್ ಅವರನ್ನು ಭೇಟಿಯಾಗುವ ಮುನ್ನವೇ ಹಲವಾರು ಭ್ರಷ್ಟಾಚಾರ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ಆಮ್ ಆದ್ಮಿ ಪಾರ್ಟಿಯೊಂದಿಗೆ ಕೆಲಸ ಮಾಡಿದ ಇವರು ಇಂದು ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ.
ಪ್ರಸ್ತುತ ಆಮ್ ಆದ್ಮಿ ಪಾರ್ಟಿ ಕರ್ನಾಟಕದ ರಾಜ್ಯ ಸಂಚಾಲಕರಾಗಿರುವ ಇವರು ದೇಣಿಗೆ ಸಂಗ್ರಹ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹಾಗೆಯೇ ಸಾಗರೋತ್ತರ ಆಮ್ ಆದ್ಮಿ ಪಾರ್ಟಿಯ ಸಹ ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭ್ರಷ್ಟಾಚಾರ ಮುಕ್ತ ಸಮಾಜ, ಸದೃಢ ಪ್ರಜಾಪ್ರಭುತ್ವ, ಪ್ರತಿ ಮಗುವಿನ ಸಾಮರ್ಥ್ಯ ಅರಿತು ಕಲಿಯಲು ಮತ್ತು ಅಭಿವೃದ್ಧಿ ಹೊಂದಲು ಅವಕಾಶ ಮಾಡಿಕೊಡುವಂತಹ ಭಾರತ, ಇವರ ಕನಸು.

ಶಿಕ್ಷಣ

ಮೆಕಾನಿಕಲ್ ಇಂಜಿನಿಯರಿಂಗ್ ಪದವೀದರರಾಗಿರುವ ಪೃಥ್ವಿ ರೆಡ್ಡಿ ಅವರು ಮ್ಯಾನೇಜ್ ಮೆಂಟ್ ನಲ್ಲಿಯೂ ಪದವಿ ಪಡೆದಿದ್ದಾರೆ. ಶಿಕ್ಷಣ ಮುಗಿಸಿದ ನಂತರ ಕೆಲ ವರ್ಷಗಳ ಕಾಲ ಯುರೋಪ್ ನಲ್ಲಿ ಕೆಲಸ ಮಾಡಿರುವ ಇವರು ನಂತರ ಭಾರತದಲ್ಲಿ ಬಂದು ನೆಲೆಸಿದರು.

Join hands to make an impact

Contact Us

top