ಪ್ರಸ್ತುತ ಆಮ್ ಆದ್ಮಿ ಪಾರ್ಟಿ ಬೆಂಗಳೂರಿನ ಅಧ್ಯಕ್ಷರಾಗಿರುವ ಮೋಹನ್ ದಾಸರಿ ಅವರು 2015ರ ಲೋಕಸಭಾ ಚುನಾವಣೆಗೆ ಚಿತ್ರದುರ್ಗದಿಂದ ಹಾಗೆಯೇ 2018 ರ ವಿಧಾನಸಭಾ ಚುನಾವಣೆಯಲ್ಲಿ ಸಿ.ವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದಿಂದ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಕಗ್ಗದಾಸಪುರ ಕೆರೆಯನ್ನು ಅಕ್ರಮವಾಗಿ ಬೇರೆ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದದ್ದನ್ನು ವಿರೋಧಿಸಿ #ಕಗ್ಗದಾಸಪುರಕೆರೆಉಳಿಸಿ ಆಂದೋಲನದಲ್ಲಿ ಭಾಗವಹಿಸಿದ್ದರು. ಲೋಕಾಯುಕ್ತವನ್ನು ಉಳಿಸಿ ಆಂದೋಲನದಲ್ಲಿ 5 ದಿನಗಳ ಕಾಲ ಉಪವಾಸ ಸತ್ಯಾಗ್ರಹವನ್ನು ನಡೆಸಿದ್ದಾರೆ. ವಸತಿ ಹಾಗೂ ಭೂ ರಹಿತರ ಪರವಾಗಿ ಹೋರಾಟ ನಡೆಸಿದ್ದಾರೆ. ದಲಿತರ ಮೇಲಿನ ದೌರ್ಜನ್ಯದ ವಿರುದ್ಧ ಆಮ್ ಆದ್ಮಿ ಪಾರ್ಟಿ ಕರ್ನಾಟಕದ ಆಂದೋಲನವನ್ನು ಮುನ್ನಡೆಸಿದ್ದಾರೆ.
ಸೂರತ್ಕಲ್ ನ NITK ಕಾಲೇಜಿನ ಸ್ನೇಹತರೊಡಗೂಡಿ ಆರುಶಿ ಫೌಂಡೇಶನ್ ಎಂಬ ಎನ್ ಜಿಒ ಸಂಸ್ಥಾಪಕರಾಗಿರುವ ಇವರು, ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ನಿರತರಾಗಿದ್ದಾರೆ. ಕಳೆದ 7 ವರ್ಷಗಳ ಅವಧಿಯಲ್ಲಿ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಾ ಬಂದಿದ್ದಾರೆ.
Join hands to make an impact