ಪ್ರಸ್ತುತ ಆಮ್ ಆದ್ಮಿ ಪಾರ್ಟಿ ಬೆಂಗಳೂರು ತಂಡದ ಸಂವಹನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನ ಚಾಮರಾಜ ಕ್ಷೇತ್ರದಿಂದ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಮೈಸೂರಿನ ಕಾರ್ಯದರ್ಶಿಯಾಗಿ ಮತ್ತು ಚಾಮರಾಜ ಕ್ಷೇತ್ರದ ಮುಖ್ಯಸ್ಥರಾಗಿಯೂ ಕೆಲಸ ಮಾಡಿದ್ದಾರೆ.
ಮಾಲವಿಕ ಅವರು ಹುಟ್ಟಿ ಬೆಳೆದಿದ್ದು ಶಿವಮೊಗ್ಗದಲ್ಲಿ. ಸುಮಾರು 15ಕ್ಕೂ ಹೆಚ್ಚು ವರ್ಷಗಳ ಕಾಲ ಇನ್ ಫೋಸಿಸ್ ಸೇರಿದಂತೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ.
ಇವರು ರಾಜ್ಯ ಮಟ್ಟದ ಬಾಸ್ಕೆಟ್ ಬಾಲ್ ಆಟಗಾರ್ತಿಯೂ ಹೌದು. ರಾಷ್ಟ್ರೀಯ ಮಟ್ಟದ ಟೀಕ್ವಾಂಡೊದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. 2014ರಿಂದ ಸಾಮಾಜಿಕ ಹಾಗೂ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು ಲಂಚಮುಕ್ತ ಕರ್ನಾಟಕ, ಲೋಕಾಯುಕ್ತ ಉಳಿಸಿ, ಪರಿಸರ ಉಳಿಸಿ, ಕನ್ನಡ ಪರ ಆಂದೋಲನಗಳಲ್ಲಿ ಭಾಗವಹಿಸಿದ್ದಾರೆ. ಅವರ ಕ್ಷೇತ್ರದಲ್ಲಿ ವಾಸವಿರುವ ಜನರ ಮನೆಗಳಿಗೆ ನೀರು ಸರಬರಾಜು ಸಂಪರ್ಕ ಕೊಡಿಸಿದ್ದಾರೆ
ಸಾಮಾನ್ಯ ಜನರಲ್ಲಿ ರಾಜಕೀಯ ಜ್ಞಾನದ ಕೊರತೆ ಮತ್ತು ನಿರಾಸಕ್ತಿಯನ್ನು ಕಂಡು, ನಾಗರಿಕರಲ್ಲಿ ರಾಜಕೀಯ ತಿಳುವಳಿಕೆಯ ಕೊರತೆಯನ್ನು ಅಳಿಸಲು ಹಾಗೂ ರಾಜಕೀಯ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಎನ್ ಜಿಒ ಒಂದನ್ನು ಸ್ಥಾಪಿಸಿದ್ದಾರೆ.
Join hands to make an impact ?