ಸ್ಥಾನ

ಖಜಾಂಚಿ, ಆಮ್ ಆದ್ಮಿ ಪಾರ್ಟಿ ಕರ್ನಾಟಕ
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು

ವ್ಯಕ್ತಿಚಿತ್ರ

2011ರಲ್ಲಿ ಆರಂಭವಾಗಿದ್ದ ಭ್ರಷ್ಟಾಚಾರದ ವಿರುದ್ಧ ಭಾರತ ಆಂದೋಲನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಹರಿಹರನ್ ಅವರು, ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರು ಹೌದು.

ವೃತ್ತಿ ಮಾಡುತ್ತಿದ್ದ ಸಮಯದಿಂದಲೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಇವರು ಸ್ನೇಹಾಲಯ ಅನಾಥಾಶ್ರಮದ ಟ್ರಸ್ಟಿಯಾಗಿದ್ದಾರೆ. ಅನಾಥ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ವಸತಿ ಸೌಲಭ್ಯ ಒದಗಿಸುತ್ತಿದ್ದಾರೆ.

ಅಪರಾಧ ಮಾಡಿ ಜೈಲು ಪಾಲಾಗುವ ಮಕ್ಕಳ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಇವರು ಅಂತಹ ಮಕ್ಕಳಿಗಾಗಿ ಇರುವ ‘ಸೋ ಕೇರ್’ ಆಶ್ರಮದ ಸದಸ್ಯರಾಗಿದ್ದು ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿದ್ದಾರೆ.

ಶಿಕ್ಷಣ

CA IIBO ಪದವಿ ಪಡೆದಿರುವ ಇವರು, ವಾಣಿಜ್ಯಶಾಸ್ತ್ರದಲ್ಲಿ ಸ್ನಾತಕ್ಕೋತ್ತರ ಪದವಿ ಹೊಂದಿದ್ದಾರೆ. ಶೆಡ್ಯುಲ್ ಕಮರ್ಷಿಯಲ್ ಬ್ಯಾಂಕ್ ನಲ್ಲಿ ಜನೆರಲ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ.

Join hands to make an impact

Contact Us

top