ಆಮ್ ಆದ್ಮಿ ಪಾರ್ಟಿಯಿಂದ ನೀವು ಮತ ಹಾಕಿದ್ದೀರಾ? ಸಮೀಕ್ಷೆ

ಪತ್ರಿಕಾ ಪ್ರಕಟಣೆ
9 ಮೇ 2019

ಆಮ್ ಆದ್ಮಿ ಪಾರ್ಟಿಯಿಂದ ನೀವು ಮತ ಹಾಕಿದ್ದೀರಾ? ಸಮೀಕ್ಷೆ ಮೇ 12 ರಂದು

ಏಪ್ರಿಲ್ 18ರಂದು ನಡೆದ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ 52% ಮತದಾನ ವಾಗಿರುವುದು ಎಲ್ಲಾ ಕಡೆ ವರದಿಯಾಗಿದೆ. ಒಂದುವರೆ ಕೋಟಿ ಜನಸಂಖ್ಯೆ ಹೊಂದಿರುವ ಬೆಂಗಳೂರಿನಲ್ಲಿ ಪ್ರತಿ ಬಾರಿ ಕಡಿಮೆ ಮತದಾನವಾಗುತ್ತಿರುವುದು ಗಂಭೀರ ವಿಷಯ.

ಜನರು ಮತದಾನ ಮಾಡದೇ ಇರಲು ನಿಜವಾದ ಕಾರಣವೇನು ಎಂಬುದನ್ನು ತಿಳಿದುಕೊಳ್ಳಲು ಆಮ್ ಆದ್ಮಿ ಪಾರ್ಟಿ ‘ನೀವು ಮತ ಹಾಕಿದ್ದೀರಾ?’ ಸಮೀಕ್ಷೆ ನಡೆಸಲಿದೆ. ಈ ಸಮೀಕ್ಷೆಯು ಆನ್ ಲೈನ್ ಹಾಗೂ ನಗರದ ಅನೇಕ ವಾರ್ಡ್ ಗಳಲ್ಲಿ ಜನರನ್ನು ಮಾತನಾಡಿಸಿ ಅಭಿಪ್ರಾಯ ಸಂಗ್ರಹಿಸಲಿದೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಾರ್ಟಿಯ ನೀತಿ ಮತ್ತು ಸಂಶೋಧನಾ ತಂಡದ ಮುಖ್ಯಸ್ಥ ಬಸವರಾಜ್ ಮುದಿಗೌಡರ ‘ಮತಬ್ಯಾಂಕ್ ಅನ್ನು ಭದ್ರಪಡಿಸಿಕೊಳ್ಳುವತ್ತ ಮಾತ್ರ ಗಮನಹರಿಸುವ ರಾಜಕೀಯ ಪಕ್ಷಗಳು ಸಾಮಾನ್ಯ ಜನರು ಚುನಾವಣೆ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿರುವುದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಜನರ ಸಮಸ್ಯೆಗಳಾವುವು? ಚುನಾವಣೆಯಲ್ಲಿ ಭಾಗವಹಿಸದೇ ಇರಲು ಕಾರಣವೇನು ಎಂಬುದರ ಬಗ್ಗೆ ಯಾವ ಪಕ್ಷವೂ ಜನರ ಹತ್ತಿರ ಹೋಗಿ ಅವರ ಮಾತನ್ನು ಆಲಿಸುವುದಿಲ್ಲ. ಕಡ್ಡಾಯ ಮತದಾನ, ಮತ ಚಲಾಯಿಸಿದವರಿಗೆ ಪ್ರೋತ್ಸಾಹಧನ ಮುಂತಾದ ವಿಲಕ್ಷಣ ಸಲಹೆಗಳನ್ನು ನೀಡುತ್ತಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಮತದಾನದ ಪ್ರಮಾಣ ಕಡಿಮೆಯಾಗಲು ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದೇ ಇರುವುದು, ತಪ್ಪು ಹೆಸರಿರುವುದು, ಹೆಸರು ಅಳಿಸಿ ಹೋಗಿರುವುದು, ಮತದಾರರು ದೀರ್ಘಾವಧಿ ರಜೆಯನ್ನು ಪ್ರಯಾಣ ಮಾಡಲು ಬಳಸಿರುವುದು ಮುಂತಾದ ಕಾರಣಗಳು ಈವರೆಗೂ ವರದಿಯಾಗಿದ್ದು, ಜನರು ಮತದಾನ ಮಾಡದೇ ಇರಲು ನೈಜ ಕಾರಣವೇನು? ಈ ಸಮಸ್ಯೆಗೆ ಪರಿಹಾರವೇನು ಎಂಬುದನ್ನು ಜನಾಭಿಪ್ರಾಯ ಸಂಗ್ರಹಿಸುವ ಮೂಲಕ ಈ ಸಮೀಕ್ಷೆ ನಡೆಸಲು ನಿರ್ಧರಿಸಿದ್ದೇವೆ’* ಎಂದು ಬಿಬಿಎಂಪಿ ಚುನಾವಣಾ ಪ್ರಚಾರದ ಮುಖ್ಯಸ್ಥೆ ಶಾಂತಲಾ ದಾಮ್ಲೆ ವಿವರಿಸಿದರು.

ಮೇ 12ರ ಭಾನುವಾರರಂದು ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತರು ತಮ್ಮ ವಾರ್ಡ್ ಗಳಲ್ಲಿ ಸಮೀಕ್ಷೆ ನಡೆಸಲಿದ್ದಾರೆ. ಬೆಂಗಳೂರಿನ ನಿವಾಸಿಗಳು ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಡಿಮೆ ಮತದಾನ ಸಮಸ್ಯೆಗೆ ಕಾರಣ ಹಂಚಿಕೊಂಡು ಪರಿಹಾರ ಹುಡುಕಲು ಸಹಕರಿಸಬೇಕು ಎಂದು ಆಮ್ ಆದ್ಮಿ ಪಾರ್ಟಿಯು ಮನವಿ ಮಾಡುತ್ತದೆ. ಈ ಸಮೀಕ್ಷೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8884431214

ಆನ್ ಲೈನ್ ಸಮೀಕ್ಷೆಯ ಲಿಂಕ್: https://rebrand.ly/DidYouVote

ಧನ್ಯವಾದಗಳೊಂದಿಗೆ

ಮಾಲವಿಕ ಗುಬ್ಬಿವಾಣಿ,
ಸಂವಹನ ಮುಖ್ಯಸ್ಥರು,
ಬಿಬಿಎಂಪಿ ಚುನಾವಣಾ ಪ್ರಚಾರ ತಂಡ
ಆಮ್ ಆದ್ಮಿ ಪಾರ್ಟಿ, ಬೆಂಗಳೂರು

Tags

top