ಹಲವು ವರ್ಷಗಳಿಂದ ಬಿಬಿಎಂಪಿಯಲ್ಲಿ ನಡೆಯುತ್ತಿದೆ ಸಾವಿರಾರು ಕೋಟಿ ಆಟೋ ಟಿಪ್ಪರ್ ಹಗರಣ

ಪತ್ರಿಕಾ ಪ್ರಕಟಣೆ
17 ಮೇ 2019

ಹಲವು ವರ್ಷಗಳಿಂದ ಬಿಬಿಎಂಪಿಯಲ್ಲಿ ನಡೆಯುತ್ತಿದೆ ಸಾವಿರಾರು ಕೋಟಿ ಆಟೋ ಟಿಪ್ಪರ್ ಹಗರಣ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೈಕ್ರೊ ಪ್ಲಾನ್ ಅಡಿಯಲ್ಲಿ ನಗರದ 198 ವಾರ್ಡ್ ಗಳಲ್ಲಿ ಕಸ ಸಂಗ್ರಹ ಮತ್ತು ವಿಲೇವಾರಿಗಾಗಿ 750 ಮನೆಗಳಿಗೆ 1 ಆಟೋದಂತೆ ಒಟ್ಟು 4466 ಆಟೋ ಟಿಪ್ಪರ್‌ಗಳು ಅಗತ್ಯವಿದೆ. ಆದರೆ ಬಿಬಿಎಂಪಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು 1273 ಆಟೋ ಟಿಪ್ಪರ್ ಗಳು ಇರುವುದು ಕೂಡ ಸಂದೇಹ!

2019-20ರ ಬಿಬಿಎಂಪಿ ಬಜೆಟ್ ಅನ್ನು ಪರಿಶೀಲಿಸುವುದಾದರೆ ಸುಮಾರು 700 ಕೋಟಿ ಹಣವನ್ನು ಘನ ತ್ಯಾಜ್ಯ ನಿರ್ವಹಣೆ, ಪೌರಕಾರ್ಮಿಕರ ವೇತನ ಹಾಗೂ ಕಸ ವಿಲೇವಾರಿಗಾಗಿಯೇ ಮೀಸಲಿಡಲಾಗಿದೆ. ಇದರಲ್ಲಿ 356 ಕೋಟಿ ಹಣ ಪೌರ ಕಾರ್ಮಿಕರ ವೇತನಕ್ಕಾಗಿಯೇ ನೀಡಲಾಗಿದ್ದು 257.2 ಕೋಟಿ ಹಣವನ್ನು ಆಟೋ ಟಿಪ್ಪರ್ ಬಳಕೆ ಒಳಗೊಂಡಂತೆ ಘನ ತ್ಯಾಜ್ಯ ನಿರ್ವಹಣೆಗೆಂದೇ ಇದೆ.

ಬಿಬಿಎಂಪಿಯಲ್ಲಿ 4466 ಆಟೋ ಟಿಪ್ಪರ್ ಇರಬೇಕಿತ್ತು. ಹಾಲಿ 2580 ಆಟೋಗಳು ಕೆಲಸ ಮಾಡುತ್ತಿರುವುದಾಗಿ ದಾಖಲೆಗಳಿವೆ. ಆದರೆ ಇದರಲ್ಲಿಯೂ ಪ್ರತಿದಿನ ಕೇವಲ 1273 ಆಟೋ ಟಿಪ್ಪರ್‌ಗಳು ಕೆಲಸಕ್ಕೆ ಹಾಜಾರಾಗುತ್ತಿವೆ. ಈ ಕುರಿತು ಹಲವಾರು ಮಾಧ್ಯಮಗಳು ಸುದ್ದಿ ಮಾಡಿವೆ. ಒಟ್ಟಾರೆಯಾಗಿ ಕೆಲಸ ಮಾಡದೇ ಇರುವ ಆಟೋ ಟಿಪ್ಪರ್‌ಗಳ ಸುಳ್ಳು ಲೆಕ್ಕ ಕೊಡುತ್ತಿರುವ ಗುತ್ತಿಗೆದಾರರು ಬಿಬಿಎಂಪಿಯಿಂದ ಕೋಟ್ಯಾಂತರ ಹಣವನ್ನು ದೋಚುತ್ತಿದ್ದಾರೆ.

ಒಂದು ಆಟೋ ಟಿಪ್ಪರ್ ಗೆ ಪ್ರತಿ ತಿಂಗಳಿಗೆ 57,000 ವ್ಯಯ ಮಾಡಲಾಗುತ್ತಿದ್ದು, ಹಾಲಿ ಕಾರ್ಯನಿರ್ವಹಿಸುತ್ತಿರುವ ಆಟೋ ಟಿಪ್ಪರ್ ಗಳ ಸಂಖ್ಯೆ 1230 ಇದ್ದು ಇವುಗಳ ಕೆಲಸಕ್ಕೆ ತಗಲುವ ವೆಚ್ಚ 80 ಕೋಟಿ. ಆದರೆ ದಾಖಲೆಯಲ್ಲಿರುವ 2580 ಆಟೋ ಟಿಪ್ಪರ್ ಗಳಿಗೆ ವರ್ಷಕ್ಕೆ ಸುಮಾರು 176.5 ಕೋಟಿ ಹಣ ನೀಡಲಾಗುತ್ತದೆ. ಆದರೆ ಬಿಬಿಎಂಪಿ ಆಟೋ ಟಿಪ್ಪರ್ ಗಳಿಗಾಗಿ ವ್ಯಯಿಸುತ್ತಿರುವ ಹಣ, ಹಾಲಿ ಕೆಲಸ ಮಾಡುತ್ತಿರುವ ಟಿಪ್ಪರ್ ಗಳಿಗಿಂತ ದುಪ್ಪಟ್ಟು!

ಮೈಕ್ರೊ ಪ್ಲಾನ್ ಪ್ರಕಾರ 4466 ಆಟೋ ಟಿಪ್ಪರ್ ಗಳಿಗೆ ಬಿಬಿಎಂಪಿ ನಿಗದಿ ಮಾಡಿರುವ ಹಣ 305 ಕೋಟಿ.

2017-18 ಬಿಬಿಎಂಪಿ ಬಜೆಟ್ ನಲ್ಲಿ ತ್ಯಾಜ್ಯ ನಿರ್ವಹಣೆಗಾಗಿಯೇ 600 ಕೋಟಿ ಹಾಗೂ 2018-19 ರಲ್ಲಿ 650 ಕೋಟಿ ಹಣ ವೆಚ್ಚ ಮಾಡಿದೆ. ಅದೇ ಸಮಯದಲ್ಲಿ ಆಟೋ ಟಿಪ್ಪರ್ ಗಳಿಗೆ ನೀಡಿದ ಹಣವು ಈ ವರ್ಷದಂತೆಯೇ ಇದ್ದು, ಸುಳ್ಳು ದಾಖಲೆ ಕೋಟ್ಟು ಗುತ್ತಿಗೆದಾರರು ಬಿಬಿಎಂಪಿಯಿಂದ ಕೋಟಿಗಟ್ಟಲೇ ಹಣ ದೋಚುತ್ತಿರುವುದು ತಿಳಿಯುತ್ತದೆ.

ಇಲ್ಲದಿರುವ ಪೌರ ಕಾರ್ಮಿಕರ ಹೆಸರಲ್ಲಿ ಲೂಟಿ ಹೊಡೆಯುತ್ತಿದ್ದನ್ನು ಬಿಟ್ಟರೆ ಬೇರೆ ವಿಭಾಗಗಳಲ್ಲಿ ಎಲ್ಲಿ, ಹೇಗೆ ಎನ್ನುವುದು ತಿಳಿದಿರಲಿಲ್ಲ, ಪ್ರಸ್ತುತ ಇದರ ಬಗ್ಗೆನೂ ಮಾಹಿತಿ ಬಂದಾಗಿದೆ ಆದರೂ ಇದುವರೆಗೂ ಯಾವೊಬ್ಬ ಗುತ್ತಿಗೆದಾರನು ಜೈಲಿಗೆ ಹೋಗಿಲ್ಲ. ಈ ಕುರಿತಂತೆ ಮುಂದಿನ ದಿನಗಳಲ್ಲಿ ಆಮ್ ಆದ್ಮಿ ಪಾರ್ಟಿ ಲೋಕಾಯುಕ್ತ, ಎಸಿಬಿ ಹಾಗೂ ಬಿಎಂಟಿಎಫ್‌ಗೆ ದೂರು ನೀಡಲಿದೆ.

ಆಮ್ ಆದ್ಮಿ ಪಾರ್ಟಿಯು ಬಿಬಿಎಂಪಿಯಲ್ಲಿ ಆಟೋ ಟಿಪ್ಪರ್ ಹೆಸರಿನಲ್ಲಿ ನಡೆದಿರುವ ಭ್ರಷ್ಟಾಚಾರದ ಹಣ ತೆರಿಗೆದಾರರ ಪ್ರಾಮಾಣಿಕ ಹಣವಾಗಿದ್ದು, ಈ ಹಣವನ್ನು ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಗಳು, 198 ವಾರ್ಡ್ ಗಳ ಕಾರ್ಪೊರೇಟರ್ ಗಳು ಹಾಗೂ ಶಾಸಕರುಗಳಿಂದ ವಸೂಲಿ ಮಾಡಬೇಕು ಎಂದು ಆಗ್ರಹಿಸುತ್ತದೆ.

ದೆಹಲಿಯಲ್ಲಿಯೂ ನೀರಿನ ಟ್ಯಾಂಕರ್ ಹಗರಣವಿತ್ತು. ಆಮ್ ಆದ್ಮಿ ಪಾರ್ಟಿ ಆಡಳಿತಕ್ಕೆ ಬಂದಮೇಲೆ ಇಲ್ಲದಂತಾಯಿತು. ಇಂದು ಬೆಂಗಳೂರಿನಲ್ಲಿ ದೆಹಲಿ ಮಾದರಿಯ ಪ್ರಮಾಣಿಕರು ಬಿಬಿಎಂಪಿಯನ್ನು ಪ್ರತಿನಿಧಿಸಬೇಕು. ಇದೇ ನಿಟ್ಟಿನಲ್ಲಿ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಎಲ್ಲ 198 ವಾರ್ಡ್ಗಳಲ್ಲಿ ಸ್ಪರ್ಧಿಸಲು, ವಿಜೇಯರಾಗಿ ಸುಂದರ ಬೆಂಗಳೂರಿನ ಕನಸನ್ನು ನನಸಾಗಿಸಲಿದೆ.

ಧನ್ಯವಾದಗಳು

ಮೋಹನ್ ದಾಸರಿ,
ಅಧ್ಯಕ್ಷರು, ಆಮ್ ಆದ್ಮಿ ಪಾರ್ಟಿ,
ಬೆಂಗಳೂರು. ಸಂಪರ್ಕ: 9900120071

Tags

94 comments

Leave a Reply

Your email address will not be published.

top