ನಮ್ಮ ಇತಿಹಾಸ

ಏಪ್ರಿಲ್ 2011ರಲ್ಲಿ , ಕಾಂಗ್ರೆಸ್ ಆಡಳಿತದ ಸಂದರ್ಭದಲ್ಲಿ ಬೆಳಕಿಗೆ ಬಂದ ದೊಡ್ಡ ಭಷ್ಟಾಚರದ ಹಗಣಗಳ ಹಿನ್ನೆಲೆಯಲ್ಲಿ ಒಂದು ನಾಗರಿಕ ಸಮಾಜ ಚಳುವಳಿ ಜನಸಿತು. ವಿವಿಧ ಹಿನ್ನೆಲೆಯುಳ್ಳ ಕಾರ್ಯಕರ್ತರು ಬಹಳ ದಶಕಗಳಿಂದ ಪಾರ್ಲಿಮೆಂಟರಿ ಕಮಿಟಿಯಲ್ಲಿ ನೆನೆಗುದಿಗೆ ಬಿದದ್ದ ಜನಲೋಕಪಾಲ್ ಮಸೂದೆಯನ್ನು ಜಾರಿಗೆ ತರುವಂತೆ ಒತ್ತಾಯಿಸಲು ಒಗ್ಗೊಡಿದರು. ಸುದ್ದಿ ಮಾದ್ಯಮಗಳು ಬಹಿರಂಗಪಡಿಸಿದ ಪ್ರತಿಯೊಂದು ಭಷ್ಟಾಚಾರ ಹಗರಣಗಳಿಂದಾಗಿ ಸಾರ್ವಜನಿಕರ ಆಕ್ರೋಶ ಮುಗಿಲುಮುಟ್ಟಿತ್ತು.ಇದರಿಂದಾಗಿ ಇಂತಹ ಭಷ್ಟ ರಾಜಕೀಯ ವ್ಯವಸ್ಥೆಯ ವಿರುದ್ಧ ಒಂದು ಬಲವಾದ ಕಾನೂನು ಬೇಕೆಂಬ ಬೇಡಿಕೆಗೆ ವ್ಯಾಪಕ ಬೆಂಬಲ ಸಿಕ್ಕಿತು. ಇಂಡಿಯ ಅಗೇನ್ನ್ಟೆ ಕರಪ್ಷನ್ ಬ್ಯಾನರ್ಕ ಅಡಿಯಲ್ಲಿ, ಜನಲೋಕಪಾಲ್ ಮಸೂದೆಯನ್ನು ತಕ್ಷಣವೇ ಅಂಗೇಕರಿಸಬೇಕೆಂದು ಒತ್ತಾಯಿಸಿ ಭಾರತೀಯರು ಅಂದಿನ ಸರ್ಕಾರದ ವಿರುದ್ಧ ಪ್ರತಿಭಟಿಸಿದರು.

ಎರಡು ವರ್ಷಗಳಲ್ಲಿ, ನೊರಾರು ನಗರಗಳು, ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ, ಲಕ್ಷಾಂತರ ಜನರು ಈ ಕಾರಣಕ್ಕಾಗಿ ತಮ್ಮನ್ನು ಒಟ್ಟುಗೊಡಿಸಿ ಕೊಂಡರು. ಪ್ರತಿಭಟನಾ ಮೆರವಣಿಗೆಗಳು, ರಾಜಕಾರಣಿಗಳ ಘೆರಾವು, ಸಾಮಾಜಿಕ ಮಾಧ್ಯಮ ಪ್ರಚಾರಗಳು, ಹೀಗೆ ಒಂದು ಕ್ರಾಂತಿಯೇ ಪ್ರಾರಂಭವಾಯಿತು. ಸಾಮಾಜಿಕ ಕಾರ್ಯಕರ್ತ ‌ಅಣ್ಣಾ ಹಜಾರೆಯವರ ನೇತ್ರತ್ವದಲ್ಲಿ ಜನಲೋಕಪಾಲ್ ಮಸೊದೆಗೆ ಬೆಂಬಲವನ್ನು ಬೆಳೆಸಲು ಹಲವಾರು ಸ್ಧಳಗಳಲ್ಲಿ ಸಾವಿರಾರು ಜನರು ಮೂರು ವಿಭಿನ್ನ ಸಂದರ್ಭಗಳಲ್ಲಿ ಉಪವಾಸದಲ್ಲಿ ಕುಳಿತರು ಮತ್ತು ಜನರ ಬೇಡಿಕೆಯಂತೆ ಕಾರ್ಯನಿರ್ವಹಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದರು. ಮೊರನೇ ಮತ್ತು ಅಂತಿಮ ಉಪವಾಸದ ಕೊನೆಯಲ್ಲಿ ಐಎಸಿಯ ಎಲ್ಲಾ ಪ್ರಯತ್ನಗಳ ಹೊರತಾಗಿಯೊ ಸಂಸತ್ತು ಇನ್ನೂ ಜನಲೋಕಪಾಲ್ ಮಸೂದೆಯನ್ನು ಜಾರಿಗೊಳಿಸಲಿಲ್ಲ.

ಜನರ ಬೇಡಿಕೆಗಳನ್ನು ಒಪ್ಪಿಕೊಳುವಲ್ಲಿ ಸರ್ಕಾರದ ವಿಫಲತೆ, ಆಳವಾದ ಬೇರೊರಿದ ಭ್ರಷ್ಟಾಚಾರದಿಂದ ಕೊಳೆಯುತ್ತಿರುವ ಭಾರತದ ರಾಜಕೀಯ ಸ್ಧಾಪನೆಯ ಪರಿಣಾಮವಾಗಿದೆ. ಜನಲೋಕಪಾಲ್ ಮಸೂದೆಯು ರಾಜಕೀಯ ಪಕ್ಷಗಳು ಮತ್ತು ಅವರ ನಾಯಕರ ಹಿತಾಸಕ್ತಿಗೆ ನೇರವಾಗಿ ಹಾನಿಕಾರಕವಾಗಿದೆ. ಈ ಸಮಯದಲ್ಲಿ ಅರವಿಂದ್ ಕೇಜ್ರಿವಾಲ್ ನೇತ್ರತ್ವದಲ್ಲಿ ಐಎಸಿ ಕಾರ್ಯಕರ್ತರ ಒಂದು ಭಗವು ಈ ದೇಶವನ್ನು ಭಷ್ಟಾಚಾರದಿಂದ ಮುಕ್ತಗೊಳಿಸುವ ಏಕೈಕ ಮಾರ್ಗವೆಂದರೆ ರಾಜಕೀಯಕ್ಕೆ ಸೇರುವುದು, ಸರ್ಕಾರವನ್ನು ಪ್ರವೇಶಿಸುದು ಮತ್ತು ವ್ಯವಸ್ಥೆಯನ್ನು ಒಳಗಿನಿಂದ ಸ್ವಚ್ಚಗೊಳಿಸುವುದು ಎಂದು ತೀರ್ಮಾನಿಸಿದರು. ಹೀಗೆ ಆಮ್ ಆದ್ಮಿ ಪಾರ್ಟಿಯೆಂಬ ಒಂದು ರಾಜಕೀಯ ಕ್ರಾಂತಿಯತ್ತ ಭ್ರಷ್ಟಾಚಾರ ವಿರೋಧಿ ಆಂದೋಲನ ಪ್ರಾರಂಭವಾಯಿತು.


ನಾವೇಕೆ ಭಿನ್ನರಾಗಿದ್ದೇವೆ?

2012 – ರಾಜಕೀಯ ಕ್ರಾಂತಿಯ ಜನನ

2012ರ ಅಕ್ಟೋಬರ್ 2ರಂದು ಆಮ್ ಆದ್ಮಿ ಪಾರ್ಟಿಯ ಹುಟ್ಟು, ಭಾರತದ ರಾಜಕೀಯ ಇತಿಹಾಸದಲ್ಲಿ ಮಹತ್ವದ ತಿರುವು. ದೇಶದ ರಾಜಕೀಯ ಮತ್ತು ಆಡಳಿತದ ಕುಸಿತವನ್ನು ನೋಡುತ್ತಿದ್ದ ಸಾಮಾನ್ಯ ನಾಗರಿಕರು ಕೂಡ ರಾಜಕೀಯದಲ್ಲಿ ಭಾಗವಹಿಸಲು ಬಾಗಿಲು ತೆರೆದಂತಾಯಿತು. ಸಾಂಪ್ರದಾಯಿಕ ರಾಜಕಾರಣ, ಕುಟುಂಬ ರಾಜಕೀಯ ಅಥವಾ ಕೋಮುವಾದಿ ವಿಚಾರಗಳಿಂದಾಗಿ ಇತರೆ ಪಕ್ಷಗಳಲ್ಲಿ ಉಂಟಾಗಿದ್ದ ಅಡೆ ತಡೆಗಳಿಲ್ಲದೆ ನಾಗರಿಕರು ಮುಕ್ತವಾಗಿ ರಾಜಕೀಯ ಸೇರಲು ಅವಕಾಶವಾಯಿತು. ಈ ಹೊಸ ಪಕ್ಷದಲ್ಲಿ ಮಹಿಳೆಯರು ಮತ್ತು ಪುರುಷರು, ವೃದ್ಧರು ಮತ್ತು ಯುವಕರು, ಬಡವರು ಮತ್ತು ಶ್ರೀಮಂತರು – ಎಲ್ಲರನ್ನು ಜನ ಸಾಮಾನ್ಯರು  ಎಂದು ಸ್ವಾಗತಿಸಲಾಯಿತು. ಎಎಪಿ ಭಾರತದಲ್ಲಿ  ಜನಸಮೂಹ ಮೂಲದ ಚುನಾವಣಾ ಧನಸಹಾಯ ಪಡೆಯುವ ಮಾದರಿಯನ್ನು ಪ್ರಾರಂಭಿಸಿದ ಮೊದಲ ಪಕ್ಷ, ಮತ್ತು ಇಂತಹ ದೇಣಿಗೆಯಿಂದಲೇ ಸಂಗ್ರಹವಾದ ಹಣದ ಮೂಲಕ ಆರಂಭದಿಂದಲೂ ಪಕ್ಷವನ್ನು ನಡೆಸುತ್ತಿದೆ. ಭಾರತದ ಆಡಳಿತ ವ್ಯವಸ್ಥೆಯಿಂದ ಭ್ರಷ್ಟಾಚಾರವನ್ನು ಕೊನೆಗೊಳಿಸುವ ಮತ್ತು ಪರ್ಯಾಯ ರಾಜಕೀಯ ಮಾದರಿಯನ್ನು ರೂಪಿಸುವ ಭರವಸೆಯೊಂದಿಗೆ ಎಎಪಿ ರಾಜಕೀಯವನ್ನು ಅದ್ದೂರಿಯಾಗಿ  ಪ್ರವೇಶಿಸಿತು.

2013 ರ ಡಿಸೆಂಬರ್ ನಲ್ಲಿ ದೆಹಲಿ ವಿಧಾನಸಭಾ ಚುನಾವಣೆಗೆ ಎಎಪಿ ಮೊದಲ ಬಾರಿಗೆ ಸ್ಪರ್ಧಿಸಲು ನಿರ್ಧರಿಸಿತು.

2012ರಲ್ಲಿ ಪಾರ್ಟಿಯ ಸ್ಥಾಪನೆ

2013- ವಿದ್ಯುತ್, ನೀರು ಆಂದೋಲನ

ದೆಹಲಿ ವಿಧಾನಸಭಾ ಚುನಾವಣೆಗೂ ಮುನ್ನ ಆಮ್ ಆದ್ಮಿ ಪಾರ್ಟಿಯು ದೆಹಲಿಯಲ್ಲಿ ಹೆಚ್ಚಳವಾಗಿದ್ದ ವಿದ್ಯುತ್ ಹಾಗೂ ನೀರಿನ ದರದ ವಿಷಯವನ್ನು ಕೈಗೆತ್ತಿಕೊಂಡು ಆಂದೋಲನವನ್ನು ಆರಂಭಿಸಿತು. ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ವಿದ್ಯುತ್ ವಿತರಣಾ ಕಂಪನಿಗಳು ಮತ್ತು ವಾಟರ್ ಟ್ಯಾಂಕರ್ ಮಾಫಿಯಾಗಳೊಂದಿಗೆ ಮಾಡಿಕೊಂಡಿದ್ದ ಒಪ್ಪಂದದ ವಿರುದ್ಧ ಉಪವಾಸ ಸತ್ಯಾಗ್ರಹವನ್ನು ಶುರು ಮಾಡಿದರು. ಶೀಲಾ ದೀಕ್ಷಿತ್ ನೇತೃತ್ವದ ಸರ್ಕಾರಕ್ಕೆ ಒತ್ತಡ ಹೇರುವ ನಿಟ್ಟಿನಲ್ಲಿ ಅರವಿಂದ್ ಕೇಜ್ರಿವಾಲ್  ಅವರು ಮಾರ್ಚ್ 23ರಿಂದ ಉಪವಾಸ ಶುರು ಮಾಡಿದರು. ಅದೇ ಸಮಯದಲ್ಲಿ, ಆಂದೋಲನಕ್ಕೆ ಜನರಿಂದ ಬೆಂಬಲ ಪಡೆಯುವ ನಿಟ್ಟಿನಲ್ಲಿ ಸಹಿ ಸಂಗ್ರಹ ಆಂದೋಲನವನ್ನು ನಡೆಸಿತು. ದೆಹಲಿಯ ಸಾರ್ವಜನಿಕರಿಂದ 10.5 ಲಕ್ಷ ಅರ್ಜಿಗಳನ್ನು ಸಂಗ್ರಹಿಸಿ ಶೀಲಾ ದೀಕ್ಷಿತ್ ಅವರಿಗೆ ಹಸ್ತಾಂತರಿಸುವ ಮೂಲಕ ಆಮ್ ಆದ್ಮಿ ಪಾರ್ಟಿಯೂ 14ನೇ ದಿನ ಉಪವಾಸವನ್ನು ಅಂತ್ಯಗೊಳಿಸಿತು. ಈ ಆಂದೋಲನವು ಎಎಪಿಯನ್ನು ಜನರ ಪರವಾಗಿ ಪ್ರಬಲ ರಾಜಕೀಯ ಶಕ್ತಿಯನ್ನಾಗಿ ಮಾಡಿತು.


2013 – ರಾಜಕೀಯ ವರ್ಗವನ್ನು ಅಲುಗಾಡಿಸಿದ ಎಎಪಿಯ ಪ್ರಥಮ ರಾಜಕೀಯ ಪ್ರವೇಶ

ಜನರ ವಿಶ್ವಾಸಪೂರ್ಣ ಬೆಂಬಲದೊಂದಿಗೆ ಎಎಪಿ ದೆಹಲಿ ವಿಧಾನಸಭೆಯಲ್ಲಿ 28 (70 ರಲ್ಲಿ) ಸ್ಥಾನಗಳನ್ನು ಗೆಲ್ಲುವ ಮೂಲಕ ದೆಹಲಿ ವಿಧಾನಸಭೆಗೆ ಪ್ರವೇಶ ಮಾಡಿತು. ಮುಖ್ಯವಾಹಿನಿಯ ರಾಜಕೀಯ ಪಕ್ಷಗಳು, ರಾಜಕೀಯ ಪಂಡಿತರು ಮತ್ತು ಸುದ್ದಿ ಮಾಧ್ಯಮಗಳಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದ ಎಎಪಿಯ ಗೆಲುವು ಅತಿ ದೊಡ್ಡ ರಾಜಕೀಯ ಕಲ್ಲೋಲವನ್ನೇ ಸೃಷ್ಟಿಸಿತು. ಕಾಂಗ್ರೆಸ್ ಪಕ್ಷವು 2008 ರಲ್ಲಿ ಗೆದ್ದ 43 ಸ್ಥಾನಗಳಿಂದ ಕೇವಲ 8 ಸ್ಥಾನಗಳಿಗೆ ಇಳಿದಿದ್ದಲ್ಲದೆ,  ನವದೆಹಲಿ ಕ್ಷೇತ್ರದಿಂದ ಮೂರು ಬಾರಿ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದ ಶೀಲಾ ದೀಕ್ಷಿತ್ ಅವರನ್ನು ಅರವಿಂದ್ ಕೇಜ್ರಿವಾಲ್ ಅವರು ದಾಖಲೆಯ ಅಂತರದಿಂದ ಸೋಲಿಸಿದ್ದರು. ಎಎಪಿಯು ಹಣ ಹಾಗೂ ತೋಳ್ಬಲದ  ಬೆಂಬಲವಿಲ್ಲದೆ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜಕೀಯ ವರ್ಗವನ್ನು ಬೆಚ್ಚಿಬೀಳಿಸಿತ್ತು. ಆಮ್ ಆದ್ಮಿ ಪಾರ್ಟಿಯು ಅಲ್ಲಿವರೆಗೂ ಜಾರಿಯಲ್ಲಿದ್ದ, ಜಾತಿ ಮತ್ತು ಧರ್ಮದ ಸಾಂಪ್ರದಾಯಿಕ ರಾಜಕಾರಣವನ್ನು ದೂರವಿರಿಸಿ ಸಮಸ್ಯೆ ಆಧಾರಿತ ಚುನಾವಣಾ ಅಭಿಯಾನವನ್ನು ನಡೆಸಿತು. ದೆಹಲಿಯ ಜನರೊಂದಿಗೆ ಸರ್ಕಾರದ ರಚನೆ ಬಗ್ಗೆ  ಸಮಾಲೋಚನೆ ನಡೆಸಿ, 2013 ರ ಡಿಸೆಂಬರ್ 28 ರಂದು ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ ಪದವಿ ಸ್ವೀಕಾರ ಮಾಡುವುದರೊಂದಿಗೆ ಅಲ್ಪಸಂಖ್ಯಾತ ಸರ್ಕಾರವನ್ನು ರಚಿಸಲಾಯಿತು.


2014- ಲೋಕಸಭಾ ಚುನಾವಣೆ

ದೆಹಲಿ ವಿಧಾನಸಭೆಯಲ್ಲಿ ಸದಸ್ಯರ ಕೊರತೆಯಿಂದಾಗಿ ಜನ ಲೋಕಪಾಲ್ ಮಸೂದೆಯನ್ನು ಅಂಗೀಕರಿಸುವಲ್ಲಿ ವಿಫಲವಾದ ನಂತರ,  ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರವು ಹೊಸ ಮತ್ತು ಪೂರ್ಣ ಜನಾದೇಶವನ್ನು ಪಡೆಯಲು 2014 ರ ಫೆಬ್ರವರಿಯಲ್ಲಿ ರಾಜೀನಾಮೆ ನೀಡಿತು.

ಅರವಿಂದ್ ಕೇಜ್ರಿವಾಲ್ ರಾಜೀನಾಮೆ ನೀಡಿದ ನಂತರ ದೆಹಲಿ ಉಪಚುನಾವಣೆ ನಡೆಯುವ ಮೊದಲೇ 2014ರ ಏಪ್ರಿಲ್-ಮೇ ತಿಂಗಳಿನಲ್ಲಿ ಲೋಕಸಭಾ ಚುನಾವಣೆ ನಿಗಧಿಯಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ದೇಶದಾದ್ಯಂತ ಸುಮಾರು 400 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಎಎಪಿ, ಪಂಜಾಬ್ ರಾಜ್ಯದ ನಾಲ್ಕು ಕ್ಷೇತ್ರಗಳಲ್ಲಿ ಜಯಗಳಿಸಿತು.

ಲೋಕಸಭಾ ಚುನಾವಣೆಯಲ್ಲಿ ಜನರು ಪಕ್ಷದಿಂದ ನಿರೀಕ್ಷಿಸಿದ್ದಕ್ಕಿಂತ ಫಲಿತಾಂಶ ಕಡಿಮೆಯಾಗಿದ್ದರೂ, ಪಂಜಾಬ್ ನಲ್ಲಿ 4 ಸೀಟುಗಳನ್ನು ಜಯಿಸಿತ್ತು.  ದೆಹಲಿಯನ್ನು ಹೊರತುಪಡಿಸಿ ಇದೇ ಮೊದಲ ಬಾರಿಗೆ ಪಂಜಾಬ್ ನಲ್ಲಿ ಆಮ್ ಆದ್ಮಿ ಪಾರ್ಟಿ ತನ್ನ ಗೆಲುವನ್ನು ದಾಖಲಿಸಿತ್ತು

2015 – ದೆಹಲಿಯಲ್ಲಿ ದಿಗ್ವಿಜಯ

2014ರ ಲೋಕಸಭಾ ಚುನಾವಣೆಯಲ್ಲಿ ದೆಹಲಿಯ ಎಲ್ಲಾ ಏಳು ಲೋಕಸಭಾ ಸ್ಥಾನಗಳನ್ನು ಕಳೆದುಕೊಂಡಿದ್ದರೂ, ಅದರಿಂದ ಶೀಘ್ರವಾಗಿ ಚೇತರಿಸಿಕೊಂಡ ಎಎಪಿ, ದೆಹಲಿಯಲ್ಲಿ ಚುನಾವಣೆ ನಡೆಯಬೇಕೆಂದು ಒತ್ತಾಯಿಸಿ ‘ಸಾಮೂಹಿಕ ಸಂಪರ್ಕ’ ಕಾರ್ಯಕ್ರಮವನ್ನು ಪ್ರಾರಂಭಿಸಿತು.

ಎಎಪಿ ಸರ್ಕಾರದ ಆಡಳಿತದ 49 ದಿನಗಳ ಸಾಧನೆಗಳನ್ನು ದೆಹಲಿಯ ಜನರಿಗೆ ತಿಳಿಸಲು ಎಎಪಿ ಒಂದು ಸಂಪರ್ಕ ಅಭಿಯಾನವನ್ನು ಆರಂಭ ಮಾಡಿತು. ಮರು ಚುನಾವಣೆಯಲ್ಲಿ, ಮತ್ತೊಮ್ಮೆ ಚುನಾಯಿತರಾಗಿ ಬಂದರೆ  ಭ್ರಷ್ಟಾಚಾರವನ್ನು ಕೊನೆಗೊಳಿಸುವುದಾಗಿ ಭರವಸೆ ನೀಡಿತು. ಈ ಸಮಯದಲ್ಲಿ,  ಪಕ್ಷವು ‘ಪಾಂಚ್ ಸಾಲ್ ಕೇಜ್ರಿವಾಲ್’ – ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರವು ತನ್ನ ಅಧಿಕಾರಾವಧಿಯನ್ನು ಪೂರ್ಣಗೊಳಿಸುತ್ತದೆ ಎಂದು ಭರವಸೆ ನೀಡಿ ದೆಹಲಿ ಜನರಿಗೆ ಕರೆ ನೀಡಿತು.

2014-15ರ ಚಳಿಗಾಲದಲ್ಲಿ ದೆಹಲಿಯಲ್ಲಿ ‘ಮಫ್ಲರ್ಮ್ಯಾನ್’ ಎಂಬ ಅಡ್ಡ ಹೆಸರಿನಲ್ಲಿ ಭ್ರಷ್ಟಾಚಾರ-ವಿರೋಧಿ ಹುಟ್ಟಿದ. ಎಲ್ಲಾ ಜಾತಿ, ವರ್ಗ ಮತ್ತು ಧಾರ್ಮಿಕ ವಿಭಜನೆಗಳಿದ್ದಾಗ್ಯೂ ಎಎಪಿಗೆ ಭರಪೂರ ಬೆಂಬಲ ವ್ಯಕ್ತವಾಯಿತು. ಕೆಲವೇ ತಿಂಗಳುಗಳ ಇಂಥ  ಬೆಂಬಲದಿಂದಾಗಿ ಕೆಲವೇ ತಿಂಗಳುಗಳ ಹಿಂದೆ ಲೋಕಸಭಾ ಚುನಾವಣೆಯನ್ನು ಭರ್ಜರಿಯಾಗಿ ಗೆದ್ದ ಬಿಜೆಪಿ ವಿರುದ್ಧ ಆಮ್ ಆದ್ಮಿ ಪಾರ್ಟಿಯ ನಿರ್ಣಾಯಕ ಗೆಲುವು ಸಿಗುವಂತಹ ಸಂದರ್ಭ ಉಂಟಾಯಿತು.

ಅಂತಿಮವಾಗಿ ಆಮ್ ಆದ್ಮಿ ಪಾರ್ಟಿಯ ಗೆಲುವು ಇಡೀ ದೇಶದಾದ್ಯಂತ ಆಶ್ಚರ್ಯವನ್ನು ಹುಟ್ಟುಹಾಕಿತು. ಎಎಪಿ ದೆಹಲಿ ವಿಧಾನಸಭಾ ಚುನಾವಣೆಯ ಒಟ್ಟು 70 ಸ್ಥಾನಗಳಲ್ಲಿ 67 ಸ್ಥಾನಗಳನ್ನು ಗೆದ್ದು, ಶೇ 54%  ಮತಗಳನ್ನು ತನ್ನದಾಗಿಸಿಕೊಂಡು ದಾಖಲೆ ನಿರ್ಮಿಸಿತು. 2015 ರ ಐತಿಹಾಸಿಕ ಚುನಾವಣೆಯ ಎರಡೇ ವರ್ಷಗಳ ಹಿಂದಷ್ಟೆ ಸ್ಥಾಪನೆಯಾದ ಆಮ್ ಆದ್ಮಿ ಪಾರ್ಟಿಯು ಭಾರತದ ರಾಜಕೀಯ ನಕ್ಷೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು.


top