Skip to main content of main site

Launch of "ಲಂಚಮುಕ್ತ ಕರ್ನಾಟಕ" " BRIBE FREE KARNATAKA "

07-10-2015

Bengaluru

Please Scroll Down for English and Kannada Version :

                                                               Press Release Launch of " BRIBE FREE KARNATAKA " campaign

The election of Congress Government in 2013 elections was the verdict of the citizens of Karnataka against the Corrupt & Incompetent Government of the BJP from 2009-13. Today, the irony is that the present government, instead of providing honest governance, is itself seeped in  corruption, thereby insulting the voice of democracy by protecting the corrupt either overtly or covertly.


An ideal Institution of Lokayukta, which was considered the best Anti-Corruption body in the whole of India, has now lost the trust of the people of Karnataka. The role of Siddaramaiah Government in transforming this able institution into a Worthless, Corrupt body is despicable. Lokayukta Bhaskar Rao has literally vindicated himself to escape from the punishment for his Crimes. The act of this government to fill vacant Upa-Lokayukta post with questionable candidates has been turned down twice and the post remains vacant till today.

A farce is being played out with the premier Anti-Corruption body remaining headless due to the absence of Lokayukta & one Upa  Lokayukta.

Resultantly, no work in government offices gets done without bribes. The plight of poor people, dependant on government services for their survival, has worsened because of ever increasing demand for incessant bribes.

The proud People of Karnataka have never encouraged Bribe & Corruption, but today are left with no choice but to live with this governmental extortion.

The responsibility to reverse this situation today falls squarely on the People of Karnataka.

AAP KARNATAKA has of late been receiving calls complaining about demand of  Bribes & Corruption at our District & State Party Offices.

When AAP responds to them by asking them to report it immediately to near-by Lokayukta, people retort back by saying “Where is the Lokayukta?

People who once looked upon Lokayukta for deliverance from Bribe & Corruption are today taking jibes on the same institution because of corrupt & incompetent officials.

The government which is full of defamed, accused, incompetent & Corrupt Ministers is institutionalizing Corruption from Top to Bottom in its Ministries & Administrative Offices. People of Karnataka are forced to witness this hopeless situation.

To counter this situation & Voice the needs of People of Karnataka, AAP-Karnataka is launching "Bribe Free Karnataka". This is a Direct Action Plan where AAP Volunteers will proactively compel government officials to work without taking a  Bribe & in case a bribe demand is reported, AAP will intervene by seeking explanations from such Government Offices & Officials.

As the part of "Bribe Free Karnataka", AAP has organized "Bribe Free Bangalore Week" beginning 13-Oct-2015 Tuesday till 17-Oct-2015 Saturday. AAP Volunteers will reach selected Sub-Registrar & RTO Offices & ensure that respective Offices will work as service providers to citizens, honestly, without recourse to any Bribe. AAP also requests respective government officials to help us with this exercise to provide easy & efficient service to people. AAP believes that most officials are honest and ready to serve citizens' bona fide requirements.

AAP's campaign is not against any Government Official or any Political Party. This is a collective expression of the Common Man against the whole Corrupt System by becoming proactive.

AAP seeks support of all Political Parties, Citizen Service Oriented Organizations, Media & all responsible Individuals of Society in this weeklong endeavor.

"Bribe Free Karnataka" is the Need of All. AAP humbly believes that everyone will selflessly join their hands in this Campaign against Bribe & Corruption.

This Campaign is not limited to Bangalore, but will continue & expand Pan-Karnataka after 17-Oct-2015.

AAP will also launch an "Anti-Corruption Helpline" in order to help Citizens of the State to report the incidents of Bribe & Corruption with ease. The details regarding this will also be published publicly very soon.

ಪತ್ರಿಕಾ ಟಿಪ್ಪಣಿ

"ಲಂಚಮುಕ್ತ ಕರ್ನಾಟಕ" - ಅಭಿಯಾನದಲ್ಲಿ ಪಾಲ್ಗೊಳ್ಳಲು ಆಹ್ವಾನ

2009 ರಿಂದ 2013 ರ ತನಕ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರದ ಸ್ವಚ್ಛಂದ ಭ್ರಷ್ಟಾಚಾರ, ಅಕ್ರಮ, ಅನೈತಿಕತೆಗಳಿಂದ ಕೂಡಿದ್ದ ಪರಮಭ್ರಷ್ಟ ಆಡಳಿತವನ್ನು ನೋಡಿ ಬೇಸತ್ತಿದ್ದ ಜನತೆ ಭ್ರಷ್ಟಾಚಾರದ ವಿರುದ್ಧ ನೀಡಿದ ಜನಾದೇಶದಿಂದ 2013 ರಲ್ಲಿ ಆಡಳಿತಕ್ಕೆ ಬಂದಿದ್ದು ಕಾಂಗ್ರೆಸ್‍ನ ಈಗಿನ ರಾಜ್ಯ ಸರ್ಕಾರ. ಆದರೆ ವಿಪರ್ಯಾಸ ಮತ್ತು ದುರದೃಷ್ಟದ ವಿಷಯವೆಂದರೆ ಈ ಸರ್ಕಾರ ಭ್ರಷ್ಟಾಚಾರವನ್ನು ನಿಯಂತ್ರಿಸುವುದಿರಲಿ, ಅದನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪ್ರೋತ್ಸಾಹಿಸುತ್ತಲೇ ಬಂದಿದ್ದು, ರಾಜ್ಯದ ಜನತೆಯ ಆದೇಶವನ್ನು ಕಾಲಕಸವಾಗಿ ಕಾಣುತ್ತ ಜನರನ್ನು ಅಣಕಿಸುತ್ತ ಬರುತ್ತಿದೆ.

ಇಡೀ ದೇಶಕ್ಕೆ ಮಾದರಿಯಾಗಿದ್ದ ನಮ್ಮ ರಾಜ್ಯದ ಲೋಕಾಯುಕ್ತ ಸಂಸ್ಥೆಯನ್ನು ಇಂದು ವಿಶ್ವಾಸಾರ್ಹತೆ ಕಳೆದುಕೊಂಡ, ನಿಷ್ಕ್ರಿಯ, ಕೆಲಸವೇ ಇಲ್ಲದ ಭ್ರಷ್ಟ ಮತ್ತು ನಿರುಪಯುಕ್ತ ಸಂಸ್ಥೆಯನ್ನಾಗಿ ಮಾಡುವಲ್ಲಿ ಸಿದ್ಧರಾಮಯ್ಯನವರ ನೇತೃತ್ವದ ಸರ್ಕಾರದ ಪಾತ್ರ ಬಹಳ ದೊಡ್ಡದು. ಮಾಡಿರುವ ಕುಕೃತ್ಯಗಳಿಂದ ತಪ್ಪಿಸಿಕೊಳ್ಳಲು ರಜೆಯ ಅವಕಾಶ ಬಳಸಿಕೊಂಡು ಭಾಸ್ಕರ ರಾಯರು ಅಕ್ಷರಷಃ ಗಡಿಪಾರಾಗಿದ್ದಾರೆ. ಉಪಲೋಕಾಯುಕ್ತ ಮಜಗೆಯವರ ನಿವೃತ್ತಿಯ ನಂತರ ಖಾಲಿಯಾದ ಉಪಲೋಕಾಯುಕ್ತ ಸ್ಥಾನಕ್ಕೆ ಕಳಂಕಿತರೊಬ್ಬರನ್ನು ತರಬೇಕೆಂಬ ಈ ಸರ್ಕಾರದ ನಿರಂತರ ಪ್ರಯತ್ನಕ್ಕೆ ಎರಡು ಬಾರಿ ಮುಖಭಂಗವಾಗಿದೆ ಮತ್ತು ಅದರ ಫಲವಾಗಿ ಒಂದು ಉಪಲೋಕಾಯುಕ್ತ ಹುದ್ದೆ ಇನ್ನೂ ಖಾಲಿ ಇದೆ. ಹೀಗೆ ಲೋಕಯುಕ್ತ ಮತ್ತು ಒಬ್ಬ ಉಪಲೋಕಯುಕ್ತ ಇಲ್ಲದ ನಿಷ್ಕ್ರಿಯ ಸಂಸ್ಥೆಯಿಂದಾಗಿ ಇಂದು ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಲಂಚವಿಲ್ಲದೆ ಕೆಲಸವಾಗುತ್ತಿಲ್ಲ ಮತ್ತು ಬಹುಸಂಖ್ಯಾತ ಬಡವರೇ ಉಪಯೋಗಿಸುವ ಸರ್ಕಾರಿ ಆಸ್ಪತ್ರೆಗಳಲ್ಲಿ ಲಂಚ ಇಲ್ಲದೆ ಮಂಚ ಇಲ್ಲಎನ್ನುವ ಸ್ಥಿತಿ ನಿರ್ಮಾಣವಾಗಿದೆ.

ಈ ರಾಜ್ಯದ ಜನತೆ ಲಂಚವನ್ನು ಮತ್ತು ಭ್ರಷ್ಟಾಚಾರವನ್ನು ಒಪ್ಪಿಕೊಂಡಿಲ್ಲ. ಆದರೆ ಅನಿವಾರ್ಯವಾಗಿ, ವಿಧಿಯಿಲ್ಲದೆ ಲಂಚಕ್ಕೆ ಒಗ್ಗಿಹೋಗಿದ್ದಾರೆ.

ಆ ಅನಿವಾರ್ಯತೆಯಿಂದ ಬಿಡಿಸಿಕೊಳ್ಳುವ ಜವಾಬ್ದಾರಿ ಈಗ ಜನರ ಮೇಲೆಯೇ ಇದೆ. ಆದರೆ ಅದು ಹೇಗೆ ಸಾಧ್ಯವಾಗುತ್ತದೆ?

ಈಗಾಗಲೆ ನಮ್ಮ ಪಕ್ಷದ ಕಚೇರಿಗೆ ಮತ್ತು ಕಾರ್ಯಕರ್ತರಿಗೆ ಇಡೀ ರಾಜ್ಯದ ವಿವಿಧ ಭಾಗಗಳಿಂದ ಲಂಚ ಮತ್ತು ಭ್ರಷ್ಟಾಚಾರದ ವಿಚಾರವಾಗಿ ಕರೆಗಳು ಬರುತ್ತಿರುತ್ತವೆ. ಇಂತಹುದರ ಬಗ್ಗೆ ಸ್ಥಳೀಯ ಲೋಕಾಯುಕ್ತಕ್ಕೆ ಈ ಕೂಡಲೆ ತಿಳಿಸಿ ಎಂದರೆ ಲೋಕಾಯುಕ್ತ ಎಲ್ಲಿದೆ ಎಂದು ಅವರೇ ಮರುಪ್ರಶ್ನೆ ಮಾಡುತ್ತಾರೆ.

ಭ್ರಷ್ಟಾಚಾರದ ಬಗ್ಗೆ, ಲಂಚದ ಬಗ್ಗೆ, ಕರ್ತವ್ಯಲೋಲುಪತೆ ಬಗ್ಗೆ ಲೋಕಾಯುಕ್ತಕ್ಕೆ ತಿಳಿಸುತ್ತೇವೆ, ದೂರು ಕೊಡುತ್ತೇವೆ ಎನ್ನುವ ಜನಸಾಮಾನ್ಯರನ್ನು ಭ್ರಷ್ಟ ಮತ್ತು ಅದಕ್ಷ ಸರ್ಕಾರಿ ಅಧಿಕಾರಿಗಳು ನಕ್ಕು ಹೀಯಾಳಿಸುವ ಮಾತುಗಳು ಕೇಳಿಬರುತ್ತಿವೆ. ಕಳಂಕಿತರು, ಭ್ರಷ್ಟರು, ಅದಕ್ಷರು, ನಿಷ್ಕ್ರಿಯ ಸಚಿವರೇ ತುಂಬಿರುವ ಈ ರಾಜ್ಯ ಸರ್ಕಾರ, ಸರ್ಕಾರದಲ್ಲಿ ಮೇಲಿನಿಂದ ಕೆಳಗಿನ ಹಂತದವರೆಗೂ ಲಂಚ ಮತ್ತು ಭ್ರಷ್ಟಾಚಾರವನ್ನು ಸಾಂಸ್ಥೀಕರಣಗೊಳಿಸುತ್ತಿರುವ ಅಪಾಯವನ್ನು ರಾಜ್ಯದ ಪ್ರಜ್ಞಾವಂತ ಜನತೆ ನೋವು ಮತ್ತು ಭಯದಿಂದ ಎದುರು ನೋಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯ ಘಟಕ ಇಡೀ ರಾಜ್ಯದಾದ್ಯಂತ "ಲಂಚಮುಕ್ತ ಕರ್ನಾಟಕ” ಅಭಿಯಾನವನ್ನು ಆರಂಭಿಸುತ್ತಿದೆ. ಎಲ್ಲೆಲ್ಲಿ ಸರ್ಕಾರಿ ಅಧಿಕಾರಿಗಳು ನ್ಯಾಯಬದ್ಧ ಕೆಲಸ ಮಾಡಿಕೊಡಲು ಜನಸಾಮಾನ್ಯರನ್ನು ಲಂಚದ ಹೆಸರಿನಲ್ಲಿ ಸುಲಿಗೆ ಮಾಡುವ ದೂರುಗಳು ಬರುತ್ತವೆಯೋ ಅಲ್ಲೆಲ್ಲ "ಲೋಕಾಯುಕ್ತ ಇಲ್ಲದ ಈ ಸಂದರ್ಭದಲ್ಲಿನೇರವಾಗಿ ನಮ್ಮ ಪಕ್ಷದ ಕಾರ್ಯಕರ್ತರು ಹೋಗಿ ಲಂಚ ಕೇಳಿದ ಅಧಿಕಾರಿಗಳನ್ನು ನೇರವಾಗಿ ಅಧಿಕೃತವಾಗಿ ಸಂಪರ್ಕಿಸಿ ವಿವರಣೆ ಕೇಳುವ ಮತ್ತು ಲಂಚವಿಲ್ಲದೆ ಕೆಲಸ ಆಗುವ ರೀತಿಯಲ್ಲಿ ಮಾಡುವ ಪ್ರಯತ್ನ ಇದಾಗಿದೆ.

ಲಂಚಮುಕ್ತ ಕರ್ನಾಟಕದ ಆರಂಭದ ಕಾರ್ಯಕ್ರಮವಾಗಿ ಮುಂದಿನ ವಾರದಲ್ಲಿ, 13-10-2015, ಮಂಗಳವಾರದಿಂದ 17-10-2015 ಶನಿವಾರದ ತನಕ "ಲಂಚಮುಕ್ತ ಬೆಂಗಳೂರು ಸಪ್ತಾಹ” ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ನಮ್ಮ ಪಕ್ಷದ ಕಾರ್ಯಕರ್ತರು ಆ ವಾರದ ಪ್ರತಿದಿನವೂ ನಗರದ ಆಯ್ದ ಸಬ್‍ರಿಜಿಸ್ಟ್ರಾರ್ ಮತ್ತು ಆರ್‌ಟಿಓ ಕಛೇರಿಗಳ ಬಳಿ ತೆರಳಿ ಅಂದು ಆಯಾಯ ಕಛೇರಿಗಳಲ್ಲಿ ಲಂಚ, ರುಷುವತ್ತು, ಕಿರುಕುಳಗಳಿಲ್ಲದ ರೀತಿಯಲ್ಲಿ ಅವರ ನ್ಯಾಯಯುತ ಕೆಲಸ ಸುಗಮವಾಗಿ ಆಗುವಂತೆ ನೋಡಿಕೊಳ್ಳಲಿದೆ ಮತ್ತು ಅದಕ್ಕೆ ಆಯಾಯ ಕಛೇರಿಯ ಸರ್ಕಾರಿ ಸಿಬ್ಬಂದಿಯ ಸಹಕಾರವನ್ನೂ ಕೋರಲಿದೆ.

ಇದು ಯಾವುದೇ ಕಾರಣಕ್ಕೂ ಸರ್ಕಾರಿ ಅಧಿಕಾರಿಗಳ ವಿರುದ್ಧವಾಗಲಿ, ಒಂದು ರಾಜಕೀಯ ಪಕ್ಷದ ವಿರುದ್ಧವಾಗಲಿ ಮಾಡುತ್ತಿರುವ ಚಳವಳಿ ಅಲ್ಲ. ಇದು ಒಟ್ಟಾರೆ ಭ್ರಷ್ತ ವ್ಯವಸ್ಥೆಯ ವಿರುದ್ಧ ಆಮ್ ಆದ್ಮಿ ಪಕ್ಷ ಜನರೊಡಗೂಡಿ, ಜನರಿಗಾಗಿ ಮಾಡುತ್ತಿರುವ ಕ್ರಿಯಾಶೀಲ ಮತ್ತು ಸಂಘಟಿತ ಹೋರಾಟ. ಈ ಹೋರಾಟಕ್ಕೆ ನಾವು ಎಲ್ಲಾ ರಾಜಕೀಯ ಪಕ್ಷಗಳ, ಜನಪರ ಸಂಘಟನೆಗಳ, ಮಾಧ್ಯಮಗಳ, ಪ್ರಜ್ಞಾವಂತ ನಾಗರಿಕರ ಬೆಂಬಲ ಮತ್ತು ಸಹಕಾರವನ್ನು ಕೋರುತ್ತೇವೆ. ಭ್ರಷ್ಟಾಚಾರದ ವಿಷಯದಲ್ಲಿ ಕೆಟ್ಟ ಹೆಸರು ಪಡೆದಿರುವ ನಮ್ಮ ರಾಜ್ಯ ಅದರಿಂದ ಮುಕ್ತಿಪಡೆದುಕೊಂಡು ಲಂಚಮುಕ್ತ ಕರ್ನಾಟಕಆಗುವುದು ಯಾರಿಗೆ ಬೇಡ? ಹಾಗಾಗಿ ಎಲ್ಲರೂ ನಮ್ಮ ಈ ಅಭಿಯಾನದಲ್ಲಿ ಕೈಜೋಡಿಸುತ್ತಾರೆ ಎನ್ನುವ ವಿಶ್ವಾಸ ಮತ್ತು ನಂಬಿಕೆ ನಮಗಿದೆ.

ಮತ್ತು ಈ ಅಭಿಯಾನ ಕೇವಲ ಬೆಂಗಳೂರಿಗೆ ಸೀಮಿತವಾಗಿಲ್ಲ. 17-10-2015ರ ಶನಿವಾರದಂದು ರಾಜ್ಯದ ಹಲವು ಜಿಲ್ಲಾಕೇಂದ್ರಗಳಲ್ಲೂ ಇದು ಜರುಗಲಿದೆ. ನಂತರದ ದಿನಗಳಲ್ಲಿ ರಾಜ್ಯದಾದ್ಯಂತ ನಿರಂತರವಾಗಿ ಮುಂದುವರೆಯುತ್ತದೆ.

ಇದಿಷ್ಟೇ ಅಲ್ಲದೆ ಬರುವ ದಿನಗಳಲ್ಲಿ ರಾಜ್ಯದ ಯಾವುದೇ ಪ್ರಜೆ ಲಂಚ ಅಥವ ಭ್ರಷ್ಟಾಚಾರ ಪ್ರಕರಣವನ್ನು ವರದಿ ಮಾಡಲು ಅಥವ ಅವರಿಗೆ ಲಂಚದ ಹೆಸರಿನಲ್ಲಿ ಆಗುತ್ತಿರುವ ಅನ್ಯಾಯವನ್ನು ಪರಿಹರಿಸಿಕೊಳ್ಳಲು ಅನುವಾಗುವಂತೆ ಒಂದು "ಭ್ರಷ್ಟಾಚಾರ ವಿರೋಧಿ ಸಹಾಯವಾಣಿ" ಸಹ ರಾಜ್ಯ ಆಮ್ ಆದ್ಮಿ ಪಕ್ಷ ಆರಂಭಿಸಲಿದೆ ಮತ್ತು ಅದಕ್ಕೆ ಸಂಬಂಧಪಟ್ಟ ವಿವರಗಳನ್ನು ಇಷ್ಟರಲ್ಲಿಯೇ ಸಾರ್ವಜನಿಕವಾಗಿ ಪ್ರಕಟಿಸಲಿದೆ.

Make a Donation