Skip to main content of main site

Demanding all 3 State Parties BJP, Congress & JDS to Pass Motion to Remove Lokayukta Bhaskar Rao in the Winter Assembly Session Starting 15th Nov 2015

Scroll Down for English Version

ಪತ್ರಿಕಾ ಪ್ರಕಟಣೆ
ದಿನಾಂಕ: 14-ನವೆಂಬರ್-2015

ರಾಜ್ಯದಲ್ಲಿ ಭೀಕರ ಬರಗಾಲ ಪರಿಸ್ಥಿತಿ ಒಂದೆಡೆಯಾದರೆ ಇನ್ನೊಂದೆಡೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ, ಸಾಲ ತೀರಿಸಲಾಗದೆ ರೈತರು ಆತ್ಮಹತ್ಯೆ ಮಾಡಿಕೊಳುತ್ತಿದ್ದಾರೆ. ಬೆಂಗಳೂರಿನಲ್ಲಿ ಕಸದ ಸಮಸ್ಯೆ, ಗುಂಡಿ ಬಿದ್ದ ರಸ್ತೆಗಳು, ವಿದ್ಯುತ್ ಅಭಾವ, ಮಹಿಳೆಯರ ಸುರಕ್ಷತೆ ಸಮಸ್ಯೆಗಳು ತಾಂಡವವಾಡುತ್ತಿದೆ. ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯೇ ಹದಗೆಟ್ಟಿದ್ದು ಪೋಲೀಸರಿಗೇ ರಕ್ಷಣೆ ಇಲ್ಲವಾಗಿದೆ. ಸರ್ಕಾರದ ಮಂತ್ರಿಗಳೇ ಭ್ರಷ್ಟಾಚಾರ ಪ್ರಕರಣಕ್ಕೆ ಸಿಕ್ಕಿಬಿದ್ದಿದ್ದಾರೆ. ಇವೆಲ್ಲಾ ವಿಷಯಗಳು ರಾಜ್ಯದ ಜನರ ಸಮಸ್ಯೆಗಳು. ಸರ್ಕಾರ ಸ್ಥಾಪಿತವಾಗುವುದು ಜನರ ಸಮಸ್ಯೆ ಬಗೆಹರಿಸಲು, ವಿರೋಧ ಪಕ್ಷಗಳ ಕರ್ತವ್ಯ ಸರ್ಕಾರವನ್ನು ಸರಿಯಾದ ದಿಕ್ಕಿನಲ್ಲಿ ಜನರಿಗೆ ಸಹಾಯವಾಗುವಂತೆ ಕೆಲಸ ಮಾಡಿಸುವುದು. ಆದರೆ ಇಡೀ ಜನಪ್ರತಿನಿಧಿ ವ್ಯವಸ್ಥೆ ಈಗ ಜನರಿಗೆ ಪಥ್ಯವಲ್ಲದ ವಿಷಯಗಳ ಕುರಿತು ಚರ್ಚೆ ನಡೆಸುತ್ತಿವೆ. ಜನರ ಆಹಾರ ಕ್ರಮಗಳು, ಪೂಜಾ ವಿಧಾನಗಳು, ಜಯಂತಿಗಳ ಆಚರಣೆಗಳ ಬಗ್ಗೆ ಜನಪ್ರತಿನಿಧಿಗಳು ಪ್ರತಿ ನಿತ್ಯ ಊವಾಚಿಸುತ್ತಿದ್ದಾರೆ. ಜನರ ಮಧ್ಯೆ ದಂಗೆ ಎಬ್ಬಿಸುತ್ತಿದ್ದಾರೆ. ಇವುಗಳ ನಡುವೆ ಅಗತ್ಯ ವಿಷಯಗಳು ಮೌಲ್ಯ ಕಳೆದುಕೊಂಡು ಜನರ ಮನಸ್ಸಿನಿಂದ ಅಳಿಸಿಹೋಗುತ್ತಿವೆ. ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ದುಸ್ಥಿತಿಗೂ ಇದೇ ಕಾರಣವಾಗಿದೆ..

ಕರ್ನಾಟಕ ಲೋಕಾಯುಕ್ತ ರಾಜ್ಯಕ್ಕೆ ಹೆಮ್ಮಯಷ್ಟೇ ಅಲ್ಲದೇ, ನ್ಯಾಯಮೂರ್ತಿಗಳಾದ ವೆಂಕಟಾಚಲಯ್ಯ ಹಾಗೂ ಸಂತೋಷ್ ಹೆಗ್ಡೆಯವರ ಆಡಳಿತಾವಧಿಯಲ್ಲಿ ಇಡೀ ದೇಶಕ್ಕೆ ಮಾದರಿ ಭ್ರಷ್ಟಾಚಾರ ವಿರೋಧಿ ಸಂಸ್ಥೆಯಾಗಿತ್ತು. ರಾಜ್ಯದ ಸಾವಿರಾರು ಜನ, ಸರ್ಕಾರ ಹಾಗೂ ಸರ್ಕಾರಿ ಇಲಾಖೆಗಳಲ್ಲಿನ ತಮ್ಮ ಕುಂದು ಕೊರತೆಗಳನ್ನು ಲೋಕಾಯುಕ್ತಕ್ಕೆ ತಂದು ದೂರು ನೀಡುತ್ತಿದ್ದರು.

ಸಂಸ್ಥೆಯ ಹಾಲಿ ಲೋಕಾಯುಕ್ತ ಭಾಸ್ಕರ್ ರಾವ್ ಹಾಗೂ ಅವರ ಮಗನ ವಿರುದ್ಧದ ಭ್ರಷ್ಟಾಚಾರ ಪ್ರಕರಣ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಘನತೆಗೆ ಧಕ್ಕೆ ತಂದಿದ್ದಲ್ಲದೆ, ಅದರ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಿದೆ. ಲೋಕಾಯುಕ್ತ ಸ್ಥಾನದಲ್ಲಿ ಭಾಸ್ಕರ್ ರಾವ್ ಮುಂದುವರೆದಷ್ಟೂ ದಿನ, ಲೋಕಾಯುಕ್ತ ಸಂಸ್ಥೆಯ ಘನತೆ ಮತ್ತಷ್ಟೂ ಕಳೆದುಂದುತ್ತಾ ಹೋಗುತ್ತದೆ ಎಂದು ಭಾವಿಸುತ್ತೇವೆ.

ಭ್ರಷ್ಟಾಚಾರ ವಿರೋಧಿ ಭಾರತ ಆಂದೋಲನದಿಂದ ಜನ್ಮ ಪಡೆದ ಕರ್ನಾಟಕ ಆಮ್ ಆದ್ಮಿ ಪಕ್ಷವು ರಾಜ್ಯದ ಜನತೆಯೊಂದಿಗೆ ಸದಾ ತನ್ನ ದನಿಗೂಡಿಸಿದೆ. ಕರ್ನಾಟಕ ಆಮ್ ಆದ್ಮಿ ಪಕ್ಷವೂ ಭ್ರಷ್ಟ ಲೋಕಾಯುಕ್ತರನ್ನ ವಿರುದ್ಧದ ಹೋರಾಟದಲ್ಲಿ ಸದಾ ಮುಂದೆ ನಿಂತಿದೆ. ಆಪ್ ಕರ್ನಾಟಕ, ಲೋಕಾಯುಕ್ತ ಭಾಸ್ಕರ್ ರಾವ್ರನ್ನು ವಜಾ ಮಾಡುವಂತೆ ಉಪಲೋಕಾಯುಕ್ತ ಹಾಗೂ ಲೋಕಾಯುಕ್ತ ರಿಜಿಸ್ಟಾರ್ಗೆ ನೀಡಿರುವ ಮನವಿಯಲ್ಲಿ ಇದಕ್ಕೆ ಒಪ್ಪಿಗೆ ಸೂಚಿಸಿರುವ ಬೆಂಗಳೂರಿನ 50 ಸಾವಿರ ನಿವಾಸಿಗಳ ಸಹಿಯನ್ನೂ ಸಂಗ್ರಹಿಸಿ ನೀಡಿದೆ.

ನಿರಂತರ ಒತ್ತಡಕ್ಕೆ ಮಣಿದಿದ್ದ ಕಾಂಗ್ರೆಸ್ ಸರ್ಕಾರ, ಲೋಕಾಯುಕ್ತ ಪದಚ್ಯುತಿಯನ್ನು ಸರಳಗೊಳಿಸಲು ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತಂದಿತ್ತು. ಆದರೆ ಈ ತಿದ್ದುಪಡಿ ಜಾರಿಗೆ ಬಂದು, ಇದೇ ಕಾರಣಕ್ಕಾಗಿ ವಿಶೇಷ ತನಿಖಾ ತಂಡ ರಚಿಸಿ ತಿಂಗಳುಗಳೇ ಕಳೆದರೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸಾರ್ವಜನಿಕವಾಗಿ ತಮಗೆ ದೋಷಾರೋಪಣೆ ಪಟ್ಟಿ ಸಲ್ಲಿಸಲು ಇತರ ಪಕ್ಷಗಳಿಂದ ಸಹಕಾರ ಸಿಗುತ್ತಿಲ್ಲ ಎಂದು ಪರಸ್ಪರ ದೂರಿವೆ. ಇನ್ನೊಬ್ಬರ ಮೇಲೆ ಗೂಬೆ ಕೂರಿಸುತ್ತಾ ರಾಜ್ಯದ ಜನರಿಗೆ ಈ ರೀತಿಯಾಗಿ ಮಂಕುಬೂದಿ ಎರಚಲು ಪ್ರಯತ್ನ ಮಾಡುತ್ತಿವೆ. 

ಹೀಗಾಗಿ ಆಪ್ ಕರ್ನಾಟಕವೂ, ಈ ಮೂರೂ ಪಕ್ಷಗಳ ರಾಜ್ಯಾಧ್ಯಕ್ಷರನ್ನು ಭೇಟಿಯಾಗಿ ದೋಷಾರೋಪಣೆ ಪಟ್ಟಿಯನ್ನು ಬರುವ ಅಧಿವೇಶನದಲ್ಲಿ ಸಲ್ಲಿಸುವಂತೆ ಆಗ್ರಹಿಸಿದೆ. ಇದಕ್ಕೆ ಸಕಾರಾತ್ಮವಾಗಿ ಸ್ಪಂದಿಸಿರುವ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರುಗಳು, ತಮ್ಮ ತಮ್ಮ ಪಕ್ಷಗಳ ಎಲ್ಲಾ ಶಾಸಕರ ಸಹಿಯೊಂದಿಗೆ 16-ನವೆಂಬರ್-2015ರಂದು ಆರಂಭವಾಗಲಿರುವ ವಿಧಾನಸಭಾ ಅಧಿವೇಶನದಲ್ಲಿ ಈ ಬಗ್ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿ ಚರ್ಚಿಸುತ್ತೇವೆ ಎಂದು ಆಶ್ವಾಸನೆ ನೀಡಿರುತ್ತಾರೆ.

ಇದರ ಜೊತೆಯಲ್ಲೇ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ರಾಜ್ಯದಾದ್ಯಂತ ಎಲ್ಲಾ ಶಾಸಕರನ್ನು ಭೇಟಿಯಾಗಿ ಭಾಸ್ಕರ್ ರಾವ್ ಪದಚ್ಯುತಿ ಕುರಿತು ಅವರ ಸಹಿ ಹಾಗು ಭರವಸೆ ಪಡೆಯುವ ಕೆಲಸದಲ್ಲಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಕಾರ್ಯಕರ್ತರು ಈಗಾಗಲೇ 65 ಶಾಸಕರನ್ನು ಭೇಟಿ ಮಾಡಿದ್ದಾರೆ. ಇವರಲ್ಲಿ 35 ಜನರು ನಮ್ಮ ಮನವಿ ಪುರಸ್ಕರಿಸಿ ಸಹಿ ಮಾಡಿದ್ದು, ಮಿಕ್ಕ 30 ಜನರಲ್ಲಿ ಕೆಲವರು ಹೈಕಮಾಂಡ್ ಒಪ್ಪಿಗೆ ನಂತರ ಪ್ರತಿಕ್ರಿಯಿಸುತ್ತೇವೆ ಎಂದರೆ, ಇನ್ನು ಕೆಲವರು ಸಹಿ ಮಾಡುವುದಿಲ್ಲ ಎಂದಿದ್ದಾರೆ. ಕೋಲಾರ ಶಾಸಕ ವರ್ತೂರು ಪ್ರಕಾಶ್ ಹಾಗೂ ಕಲ್ಬುರ್ಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ (ಅಪ್ಪೂ ಗೌಡ) ಮನವಿಯನ್ನು ನೋಡದೆಯೇ ಅಸಭ್ಯ ವರ್ತನೆ ತೋರಿ ವಾಪಾಸ್ ಕಳುಹಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಆಪ್ ಕರ್ನಾಟಕ ಸಂಚಾಲಕರಾದ ಪೃಥ್ವಿ ರೆಡ್ಡಿ "ಇದು, ದೇಶದ ಸಾಂಪ್ರದಾಯಿಕ ಪಕ್ಷಗಳ ಮೂಲಭೂತ ನೂನ್ಯತೆಯನ್ನು ತೋರಿಸುತ್ತದೆ. ಜನಪ್ರತಿನಿಧಿಗಳಾದ ಶಾಸಕರು, ಜನರನ್ನು ಪ್ರತಿನಿಧಿಸುವ ಬದಲು ತಮ್ಮ ಪಕ್ಷಗಳನ್ನು ಪ್ರತಿನಿಧಿಸುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲೋಕಾಯುಕ್ತ ಪದಚ್ಯುತಿಗೊಳಿಸಲು ಸರ್ಕಾರ ಸುಖಾಸುಮ್ಮನೇ ಸಮಯ ವ್ಯರ್ಥ ಮಾಡುತ್ತಿದೆ. ಇದರಿಂದ ದಿನಂಪ್ರತಿ, ಸಾರ್ವಜನಿಕರು, ತಮ್ಮ ಅಹವಾಲು ಕೇಳಲು ಯಾರೂ ಇಲ್ಲದೇ ತೊಂದರೆಗೊಳಗಾಗುತ್ತಿದ್ದಾರೆ. ಆಪ್ ಕರ್ನಾಟಕ, ಶ್ರೀ ಜಿ.ಪರಮೇಶ್ವರ್, ಶ್ರೀ ಪ್ರಹ್ಲಾದ್ ಜೋಷಿ ಹಾಗೂ ಶ್ರೀ ಕುಮಾರಸ್ವಾಮಿಯವರಲ್ಲಿ ತಮ್ಮ ತಮ್ಮ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಕೈಬಿಟ್ಟು, ತಮ್ಮ ತಮ್ಮ ಪಕ್ಷಗಳ ಎಲ್ಲಾ ಶಾಸಕರು ರಾಜ್ಯದ ಜನರಿಗಾಗಿ ಒಟ್ಟಾಗಿ, ಲೋಕಾಯುಕ್ತ ಸ್ಥಾನದಿಂದ ಭಾಸ್ಕರ್ ರಾವ್ ಪದಚ್ಯುತಿಗೊಳಿಸಲು ಬೇಕಿರುವ ಕೆಲಸವನ್ನು ಇದೇ ಅಧಿವೇಶನದಲ್ಲಿ ಪೂರ್ಣಗೊಳಿಸುವಂತೆ ಈ ಮೂಲಕ ಮನವಿ ಮಾಡುತ್ತದೆ. ರಾಜ್ಯದ ಜನತೆ ಇವೆಲ್ಲವನ್ನು ಸೂಕ್ಷವಾಗಿ ಗಮನಿಸುತ್ತಿದ್ದಾರೆ. ಈ ಕೆಲಸದಲ್ಲಿ ಯಾವುದೇ ವಿಳಂಬವಾದಲ್ಲಿ ಅದು, ಎಲ್ಲಾ ಚುನಾಯಿತ ಪ್ರತಿನಿಧಿಗಳು ಭ್ರಷ್ಟರ ರಕ್ಷಣೆಗೆ ನಿಂತಿದ್ದು, ಲೋಕಾಯುಕ್ತ ಸಂಸ್ಥೆಯನ್ನು ನಿರ್ನಾಮ ಮಾಡುವ ಸಂಚು ಎಂದು ಪರಿಭಾವಿಸಬೇಕಾಗುತ್ತದೆ.

ಪೃಥ್ವಿ ರೆಡ್ಡಿಯವರು "ಆಪ್ ಕರ್ನಾಟಕ ಈ ವಿಷಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಾ, ಜನರಿಗೆ ಚುನಾಯಿತ ಪ್ರತಿನಿಧಿಗಳ ಮೋಸವನ್ನು ಬಯಲುಮಾಡುತ್ತಾ, ಕರ್ನಾಟಕ ಲೋಕಾಯುಕ್ತ ಸಂಸ್ಥೆಯನ್ನು ರಕ್ಷಿಸಲು ಒಟ್ಟಾಗಿ ಎದ್ದು ನಿಲ್ಲುವಂತೆ ಮಾಡುತ್ತದೆ" ಎಂದು ಎಲ್ಲಾ ಜನಪ್ರತಿನಿಧಿಗಳಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. 

English

Press Release

Date: 14-Nov-2015

Karnataka is facing extreme drought conditions, the prices of basic food commodities like Onion, Dal are rising day by day. Farmers are committing suicide all over the state. Bangalore is facing huge problems in Garbage Disposal, Women Safety & Power Load Sheddings. The whole Law & Order system has collapsed in the State. Minister of the State Government are being caught in Issue of Corruption. These are the major problems faced by Common Man. Governments are formed to address these problems of Comman Man & Opposition is to see to that Governement performs its duty well. But, Ironically Every Elected Representative is only worried about who eats what, who disrespects which culture & who celebrates what function in the State. The Whole Public Representative system is busy talking about issues that does not matter to Common Man of State. In these circumstances, Genuine Issues are becoming Meaningless & are being forgotten from minds of society. The sorrow state of Karnataka Lokayukta is one such issue.

The Institution of Lokayukta was not just an anti-corruption body and the Pride of Karnataka, but was a model institution for Lokayuta's around the country during the eras of Justices Venkatachala and Justice Santosh Hegde. Apart from acting as the anti-corruption ombudsman, thousands of people approached the institution to resolve grievances that public had with government and government officials .

In Karnataka, since the charges of serious corruption against the present incumbent Sri Bhaskar Rao, his son and others have come to the fore, the credibility and sanctity of the entire institution has been put at stake.

The Aam Aadmi Party Karnataka, a party born out of the IAC movement, has given voice to the common people of Karnataka and has been in the forefront of the protests demanding removal of the Lokayukta . AAP , Karnataka even submitted a petition to the Upalokayukta and the Registrar of the Lokayukta with nearly 50,000 signatures of Bengaluru residents and thousands more from other parts of the state. 
Due to sustained pressure , the State government brought in necessary amendments to the earlier Lokayukta Act to simplify the process of removal to the Lokayukta. However, it has been many months, since passing of this amendment and the establishment of the SIT for this purpose. All the three major political parties ie, the Congress, BJP, JDS  publicly claimed that they are unable to proceed with impeaching Mr Bhaskar Rao since they have not received the required support for the impeachment motion from the other main parties. People of Karnataka have witnessed a game of passing the buck between the Congress, BJP and the JD(S). There appears to be  an unusual unity amongst these political parties when it comes to enforcing anti-corruption laws.

Aam Aadmi Party, Karnataka has therefore reached out to the State Party Presidents of the Congress, BJP as well as the JDS,  who have all assured us that all their MLA's will sign such a motion and ensure it is brought up on top priority in the upcoming Assembly session scheduled to start on Monday 16-Nov-2015.
In addition, AAP volunteers across the state are in the process of contacting their respective MLA's and seeking their assurance to impeach Mr Bhaskar Rao. In this process Our volunteers have already met 65 MLA’s out of which 35 have signed & agreed to our petition. Among remaing 30, some of them have refrained from commenting anything saying they cant proceed without High Command Permission & some MLA’s have rejected our Plea. MLA’s from Kolar & Kalburgi South Constituency, Mr. Varthur Prakash & Dattatreya Patil have misbehaved without even looking into our request.  Aam Aadmi Party State Convenor, Prithvi Reddy said "This exposes a very fundamental flaw in traditional political parties , wherein an MLA who is an "elected representative" chooses not to "represent" the people who voted for them and chooses instead to "represent" their "party" .

This matter has now taken way too long and has caused serious hardships and problems to the common man facing corruption on a daily basis in our state. AAP has appealed to Mr G. Parameshvar, Mr Prahlad Joshi & Mr HD Kumaraswamy to put aside their political differences and join hands to initiate the process of removal of the Lokayukta by ensuring that MLAs of Congress, BJP & JDS in unison  immediately take steps for the removal of the Lokayukta in the upcoming assembly session.
The upcoming Assembly session is the time to deliver on assurances made in this matter, people of the state are watching and any attempt to further delay the matter, will only mean that our "elected representatives" are protecting the corrupt and are in collusion with such people in trying to completely destroy the institution of Lokayuktha in Karnataka .

Mr. Prithvi Reddy went onto say that, "AAP will further escalate the matter by creating an awareness regarding the betrayal by our elected representatives and ask the common people of Karnataka to come together to protect the institution of Lokayuktha in Karnataka.”

Make a Donation