ಬಸವರಾಜ್ ಮುದಿಗೌಡರ್ ವೃತ್ತಿಯಲ್ಲಿ ಒಬ್ಬ ಉದ್ಯಮಿ ಮತ್ತು ಎಂಜಿನಿಯರ್. ಅವರು ವೃತ್ತಿಜೀವನದ ಭಾಗವಾಗಿ ಟೋಕಿಯೋಯಿಂದ ಕ್ಯಾಲಿಫೋರ್ನಿಯಾವರೆಗೆ ಪ್ರಯಾಣ ಬೆಳೆಸಿದ್ದಾರೆ. ಇವರು ಭಾರತಕ್ಕೆ ಹಿಂದಿರುಗುವ ಇಚ್ಛೆಯಿಂದ 2009ರಲ್ಲಿ ಮರಳಿ ಬಂದರು. ಅವರ ವಿದೇಶದಲ್ಲಿನ ಅನುಭವ ಮತ್ತು ಭಾತರದಲ್ಲಿನ ಪರಿಸ್ಥಿತಿಗಳು ಇಲ್ಲಿಯ ವ್ಯವಸ್ಥೆಯ ಬಗ್ಗೆ ಪ್ರಶ್ನೆಮಾಡುವಂತೆ ಪ್ರೇರೇಪಿಸಿದವು. ಇದರಿಂದಾಗಿ ಸ್ವಾಭಾವಿಕವಾಗಿ ಭ್ರಷ್ಟಾಚಾರದ ವಿರುದ್ಧ ಭಾರತ ಆಂದೋಲನದಲ್ಲಿ ಸೇರಿಕೊಂಡರು. ಆಂದೋಲನವು ಅವರನ್ನು
ಆಮ್ ಆದ್ಮಿ ಪಕ್ಷದೊಂದಿಗೆ ಸೇರುವಂತೆ ಮಾಡಿತು. ಜಿಲ್ಲಾ ಸಂಚಾಲಕರಾಗಿ ಆಯ್ಕೆಯಾದ ಇವರು, ಇಂದು ಎಎಪಿ ಕರ್ನಾಟಕದ ನೀತಿ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥರಾಗಿದ್ದಾರೆ.
ಕ್ರಿಯಾಶೀಲತೆಯಿಂದ ಕೂಡಿದ ರಾಜಕೀಯ ಚಟುವಟಿಕೆಯು ದೇಶದಲ್ಲಿ ಅಗತ್ಯವಾದ ಬದಲಾವಣೆಯನ್ನು ತರುತ್ತದೆ. ಸಮಾಜದಲ್ಲಿನ ಸಮಾನ ಮನಸ್ಕರೆಲ್ಲರೂ ವೈಯಕ್ತಿಕ ಆಕಾಂಕ್ಷೆಗಳನ್ನು ಮತ್ತು ಅಹಂಕಾರವನ್ನು ಬಿಟ್ಟು ದೇಶ ನಿರ್ಮಾಣ ಕಾರ್ಯದಲ್ಲಿ ಒಟ್ಟುಗೂಡಿ ದುಡಿದರೆ ಭಾರತವನ್ನು ಅದರ ನಿಜವಾದ ಸ್ಥಾನದಲ್ಲಿ ನೋಡಬಹುದು ಎಂದು ಅವರು ಪ್ರಾಮಾಣಿಕವಾಗಿ ನಂಬಿದ್ದಾರೆ.
ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯವನ್ನೂ, ಗುಣಮಟ್ಟದ ಮೂಲಸೌಕರ್ಯಗಳನ್ನು ಹಾಗೂ ಮೂಲಭೂತ ಅಗತ್ಯತೆಗಳನ್ನು ಪೂರೈಸಬೇಕು. ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು. ಸಾರ್ವಜನಿಕ ಸಂಪನ್ಮೂಲಗಳ ಬಗೆಗೆ ನಾಗರೀಕರನ್ನು ಜವಬ್ದಾರರನ್ನಾಗಿ ಮಾಡುವುದರ ಮೂಲಕ ನೈಜ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಘೋಷಿಸುವುದು. ಅಗತ್ಯತೆಯ ಆಧಾರದ ಮೇಲೆ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಿ, ದುರಾಸೆ ಆಧಾರಿತ ವಿನಾಶವನ್ನು ಮೊಟಕುಗೊಳಿಸಿ, ಅವಕಾಶ ವಂಚಿತರಿಗೆ ಕಾನೂನು ಬದ್ಧವಾದ ಆಡಳಿತ ನೀಡುವುದು ಮತ್ತು ನೀತಿಗಳನ್ನು ಅಭಿವೃದ್ಧಿಪಡಿಸುವುದು ಅವರ ಮುನ್ನೋಟವಾಗಿದೆ.
Join hands to make an impact