Skip to main content of main site

AAP- Karnataka stands for Tamilnadu - ತಮಿಳುನಾಡಿನ ಸಹಾಯಕ್ಕೆ ನಿಂತ ಆಪ್ ಕರ್ನಾಟಕ

English

Date: 12-Dec-2015

Press Release

AAP- Karnataka stands for Tamilnadu

The tragic calamity that befell chennai , cuddalore , puducherry & its neighbouring areas recently saw many an organisation & well intentioned individuals reach out to those affected by the flooding of their dwellings & left homeless.

Under the proactive & dedicated guidance of State Convener Prithvi Reddy , AAP Karnataka instantly reached out and via a series of planned & well coordinated efforts with our local teams in Chennai, Cuddalore & Puducherry sent out Huge Quantities of Biscuits, Drinking Water Bottles, Buns, ORS  Hydration Sachets , Tetra Pack Milk Sachets , Blankets , Bedsheets , Shirts, Lungi's, children's clothes, Chlorine for water purification, Solar Lamps, Freshly Made Chappatis, Sanitary Pads, Adult & Child Diapers, Mosquito Repellents & the many more relief materials .

AAP for HUMANITY saw scores of our volunteers namely Sameer Asad, Vikash Shukla, Kundan Singh, Manas Reddy, Zia Nomani, Alok Shukla, Vijay Sharma  & others braving personal health issues & setting aside personal commitments unite in relief measures for the flood affected areas.

Hundreds of well meaning individuals of Bengaluru & organisations such as Karnataka Hosiery  & Garments  Association, Bangalore Sikh Youth & Sikh Community of Bangalore, Corporate Citizen Foundation & others contributed large quantities of relief materials. The NDRF helpline in Jal Bhavan was manned 24/7 by AAP Karnataka volunteers namely Akram Sait, Venkatesh Prasad, Naveen Khader, Firoz & others who tirelessly attended distress calls. Wading in waist high waters our volunteers reached out to the stricken families with life saving food & water and it was heart wrenching to see the pitiable condition of the affected residents and their tears of joy when they realised that we were reaching out to them.

Our teams identified the most remotely located areas with inputs from the NDRF and took those areas as a priority as they were the ones that had not received any type of aid at all. Six Remote Villages of Cuddalore District saw AAP volunteers as the first responders with relief materials.

Siddharth Sharma, Co-Convener, AAP Karnataka upon getting inputs from our Cuddalore Team that No Government Aid had reached Eight villages in Cuddalore immediately contacted the DC of Cuddalore & informed him of the same & also informed him that an AAP relief aid team of 40 volunteers was already working in those areas and they would be glad to assist the Government teams if they needed help

AAP Karnataka sent out 5 truck loads of timely relief materials and well over 250 AAP volunteers actively played a role in co-ordinating & distributing relief materials directly to the affected persons.

                                                              Thanking You,                       

Shivakumar Chengalaraya

State Co-Convenor & Media In-Charge

                                                             AAP Karnataka

Kannada

ದಿನಾಂಕ: 12-ಡಿಸೆಂಬರ್-2015

ಪತ್ರಿಕಾ ಪ್ರಕಟಣೆ

ತಮಿಳುನಾಡಿನ ಸಹಾಯಕ್ಕೆ ನಿಂತ ಆಪ್ ಕರ್ನಾಟಕ

ಚೆನ್ನೈ, ಕಡಲೂರು, ಪುದುಚೆರಿ ಹಾಗೂ ತಮಿಳುನಾಡಿನ ಇನ್ನಿತರ ಭಾಗಗಳಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದಾಗಿ ಸಾಕಷ್ಟು ಜನ ನೆಲೆ ಕಳೆದುಕೊಳ್ಳುವಂತಾಯಿತು. ಈ ಸಂರ್ಧರ್ಭದಲ್ಲಿ ಅನೇಕ ಸ್ವಯಂ ಸೇವಾ ಸಂಘಟನೆಗಳು ಸಂತ್ರಸ್ತರ ನೆರೆವಿಗೆ ಧಾವಿಸಿದ್ದರು. 

ಆಮ್ ಆದ್ಮಿ ಪಾರ್ಟಿ-ಕರ್ನಾಟಕದ ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿಯವರ ನೇತ್ರತ್ವದಲ್ಲಿ ಆಪ್ ಕಾರ್ಯಕರ್ತರ ತಂಡ ತಕ್ಷಣ ಪರಿಹಾರ ಕಾರ್ಯಚರಣೆಗೆ ಧಾವಿಸಿತ್ತು. ಅತ್ಯಂತ ಶಿಸ್ತುಬದ್ಧ ಹಾಗೂ ಯೋಜಿತ ನಕ್ಷೆಯೊಂದಿಗೆ ಕಾರ್ಯಚರಣೆಗೆ ಇಳಿದ ತಂಡ ಚೆನ್ನೈ, ಕಡಲೂರು ಹಾಗೂ ಪುದುಚೇರಿಯ ಸ್ಥಳೀಯ ತಂಡಗಳ ನೆರೆವಿನೊಂದಿಗೆ ರಾಜ್ಯದಿಂದ ಭಾರಿ ಪ್ರಮಾಣದಲ್ಲಿ ಬಿಸ್ಕತ್‍ಗಳು, ಕುಡಿಯುವ ನೀರಿನ ಬಾಟಲ್‍ಗಳು, ಬನ್ನು, ಓ.ಆರ್.ಎಸ್ ಪೌಡರ್ ಪ್ಯಾಕೆಟ್‍ಗಳು, ಟೆಟ್ರಾ ಪ್ಯಾಕ್ ಹಾಲಿನ ಪ್ಯಾಕೆಟ್ಗಳು, ಬೆಡ್ ಶಿಟ್ ಹಾಗೂ ಹೊದಿಕೆಗಳು, ಶರ್ಟ್, ಲುಂಗಿ, ಮಕ್ಕಳ ಉಡುಪುಗಳು, ಸ್ಯಾನಿಟರಿ ಪ್ಯಾಡ್, ವಯಸ್ಕರ ಹಾಗೂ ಮಕ್ಕಳ ಡೈಪರ್‍ಗಳು, ಸೋಲಾರ್ ಲ್ಯಾಂಪ್ ಸೇರಿದಂತೆ ಅನೇಕ ಪರಿಹಾರ ಸಾಮಗ್ರಿಗಳನ್ನು ಸಂತ್ರಸ್ತರಿಗೆ ತಲುಪುವಂತೆ ಮಾಡಿದೆ. 

ಮಾನವೀಯತೆಗಾಗಿ ನಿಂತ ಆಪ್ ಕಾರ್ಯಕರ್ತರ ತಂಡದಲ್ಲಿ ಸಮೀರ್ ಅಸದ್, ವಿಕಾಸ್ ಶುಕ್ಲ, ಕುಂದನ್ ಸಿಂಗ್, ಮಾನಸ್ ರೆಡ್ಡಿ, ಜಿಯಾ ನೋಮಾನಿ, ಅಲೋಕ್ ಶುಕ್ಲ, ವಿಜಯ್ ಶರ್ಮರಂತಹ ಅನೇಕ ಕಾರ್ಯಕರ್ತರು ತಮ್ಮ ವಯಕ್ತಿಕ ಆರೋಗ್ಯವನ್ನೂ ಗಮನಿಸದೇ ಪರಿಹಾರ ಕಾರ್ಯದಲ್ಲಿ, ಸಂತ್ರಸ್ತರಿಗೆ ನೆರೆವಾಗುವುದರಲ್ಲಿ ತಮ್ಮ ಸಮಯವನ್ನು ತೊಡಗಿಸಿಕೊಂಡರು.

ಕರ್ನಾಟಕ ಹೊಸೈರಿ & ಗಾಮೆಂಟ್ರ್ಸ್ ಅಸೋಶಿಯೇಶನ್, ಬೆಂಗಳೂರು ಯುವ ಸಿಖ್ ಸಂಘಟನೆ, ಕಾರ್ಪೊರೇಟ್ ಸಿಟಿಜನ್ ಫೌಂಡೇಶನ್ ಹಾಗೂ ನೂರಕ್ಕೂ ಹೆಚ್ಚು ಸ್ವಯಂ ಸೇವಾ ಸಂಘಟನೆಗಳು ಪರಿಹಾರ ಕಾರ್ಯಚರಣೆಗೆ ನೆರವಾಗಿದ್ದಾರೆ. ಜಲ ಭವನದ ಎನ್.ಡಿ.ಆರ್.ಎಫ್ ಸಹಾಯವಾಣಿ ಕೇಂದ್ರದಲ್ಲಿ 24/7 ಆಪ್ ಕರ್ನಾಟಕ ಕಾರ್ಯಕರ್ತರಾದ ಅಕ್ರಮ್ ಸೇಟ್, ವೆಂಕಟೇಶ್ ಪ್ರಸಾದ್, ನವೀನ್ ಖಾದರ್, ಫಿರೋಜ್ ಮುಂತಾದವರು ಕಾರ್ಯನಿರ್ವಹಿಸಿದ್ದಾರೆ. ಸೊಂಟಕ್ಕಿಂತ ಹೆಚ್ಚಿನ ಮಟ್ಟದಲ್ಲಿ ನೀರು ಹರಿಯುತ್ತದ್ದರೂ ಅದನ್ನು ಲೆಕ್ಕಿಸದೆ ಸಂತ್ರಸ್ತರಿಗೆ ತಮ್ಮ ಸಹಾಯ ಹಸ್ತವನ್ನು ಕಾರ್ಯಕರ್ತರು ಚಾಚಿದ್ದಾರೆ. ಕಾರ್ಯಕರ್ತರ ತಂಡ ಪರಿಹಾರ ಸಾಮಗ್ರಿಗಳೊಡನೆ ಸ್ಥಳ ತಲುಪಿದಾಗ ಅನೇಕ ಸಂತ್ರಸ್ತರಲ್ಲಿ ಚಿಮ್ಮಿದ ಕಣ್ಣೀರು, ಮನ ಕಲುಕುವಂತಿತ್ತು. 

ಎನ್.ಡಿ.ಆರ್.ಎಫ್ ಸಹಾಯವಾಣಿಯ ಕರೆಗಳ ಆಧಾರದ ಮೇಲೆ ನಮ್ಮ ತಂಡ ಕಡಲೂರಿನಂತಹ ಸ್ಥಳಗಳಿಗೆ ಯಾವುದೇ ಪರಿಹಾರ ಸಾಮಗ್ರಿಗಳು ತಲುಪದಿರುವುದುದನ್ನು ಕಂಡುಕೊಂಡಿತು. ಕಡಲೂರಿನ, ಸಂಪರ್ಕಕ್ಕೆ ಸಿಗದಿದ್ದ ಆರು ಹಳ್ಳಿಗಳಿಗೆ ನಮ್ಮ ಕಾರ್ಯಕರ್ತರ ತಂಡ ಮೊದಲನೆದಾಗಿ ಪರಿಹಾರ ಸಾಮಗ್ರಿಗಳೊಡನೆ ತಲುಪಿತು. ರಾಜ್ಯ ಸಹ-ಸಂಚಾಲಕರಾದ ಸಿದ್ಧಾರ್ಥ ಶರ್ಮ, ಕಡಲೂರು ಡಿಸಿಗೆ ಈ ವಿಷಯ ತಿಳಿಸಿ, ತಕ್ಷಣವಾಗಿ ಅಲ್ಲಿ ಸರ್ಕಾರಿ ಪರಿಹಾರ ಸಾಮಗ್ರಿಗಳನ್ನು ತಲುಪಿಸುವಂತೆ ಆಗ್ರಹಿಸಿ, ಹಾಗೆಯೇ ಯಾವುದೇ ಸಹಾಯ ಬೇಕಿದ್ದಲ್ಲಿ ನಮ್ಮ ಕಾರ್ಯಕರ್ತರನ್ನು ಸಂಪರ್ಕಿಸಿ ಎಂದೂ ಸೂಚಿಸಿದ್ದರು. 

ಆಪ್ ಕರ್ನಾಟಕ 5 ಟ್ರಕ್‍ಗಳಲ್ಲಿ ಅಗತ್ಯ ಪರಿಹಾರ ಸಾಮಗ್ರಿಗಳನ್ನು ಸಮಯದ ಅಗತ್ಯತೆಗೆ ತಕ್ಕಂತೆ ತಮಿಳಿನಾಡಿನ ನೆರೆ ಪೀಡಿತ ಪ್ರದೇಶಗಳಿಗೆ ಕಳುಹಿಸಿಕೊಟ್ಟಿದೆ. ಅದಲ್ಲದೇ 250ಕ್ಕೂ ಹೆಚ್ಚು ಕಾರ್ಯಕರ್ತರು ಈ ಕಾರ್ಯಚರಣೆಯಲ್ಲಿ ಸ್ವಯಂಪ್ರೇರಿರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 

                                                              ಧನ್ಯವಾದಗಳೊಂದಿಗೆ
                                                            ಶಿವಕುಮಾರ್ ಚೆಂಗಲರಾಯ

ರಾಜ್ಯ ಸಹ-ಸಂಚಾಲಕರು ಹಾಗೂ ಮಾಧ್ಯಮ ಉಸ್ತುವಾರಿಗಳು                                     

ಆಮ್ ಆದ್ಮಿ ಪಾರ್ಟಿ-ಕರ್ನಾಟಕ

Make a Donation